ಚೀನಾ: ವಾಯವ್ಯ ಚೀನಾದ ಹಲವೆಡೆ ಸಂಭವಿಸಿದ ಭೂಕಂಪದಿಂದಾಗಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.9 ರಷ್ಟಿತ್ತು ಎನ್ನಲಾಗಿದೆ. ವಾಯವ್ಯ ಚೀನಾದ ಗನ್ಸು ಮತ್ತು ಕಿಂಗ್ಹೈ ಪ್ರಾಂತ್ಯಗಳಲ್ಲಿ ಭೂಕಂಪ ಸಂಭವಿಸಿದೆ. ದುರಂತದಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ‘ಕ್ಸಿನ್ಹುವಾ’ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ‘ಎಪಿ’ ವರದಿ ಮಾಡಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ,ಭೂಕಂಪದಿಂದ ಹತ್ತಾರು ಕಟ್ಟಡಗಳು ನಾಶವಾಗಿವೆ. ಸದ್ಯ ಅವಶೇಷಗಡಳಡಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪವು ಲಿನ್ಕ್ಸಿಯಾ ಚೆಂಗ್ಗುವಾನ್ಜೆನ್, ಗನ್ಸು ಮತ್ತು ಗನ್ಸುವಿನ ಲಾಂಜೌದಿಂದ ಸುಮಾರು 100 ಕಿಮೀ ದೂರದಲ್ಲಿ ಸಂಭವಿಸಿದೆ. ಭೂಕಂಪವು ಸುಮಾರು 10 ಕಿಲೋಮೀಟರ್ ಆಳದಲ್ಲಿ ಕೇಂದ್ರಿತವಾಗಿತ್ತು ಎಂದು ಹೇಳಲಾಗಿದೆ.