ಬೆಂಗಳೂರು : 24 ಲಕ್ಷ ರೂಪಾಯಿ ಬೆಲೆ ಬಾಳುವ ಬೈ ಕ್ ಒಂದರ ಸ್ಫಡ್ ತೋರಿಸಲು ಹೋಗಿ ಯುವಕನೋರ್ವ ಜೀವ ಕಳಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೈಕ್ ಸವಾರ ಶೇಕ್ ನಾಸಿರ್ (32) ಮೃತ ಯುವಕನಾಗಿದ್ದರೆ, ಹಿಂಬದಿ ಸವಾರ ಸೈಯದ್ ಮುದಾಸಿರ್ ಎಂಬಾತನಿಗೆ ಗಂಭೀರ ಗಾಯವಾಗಿದೆ. ಬಿಎಂಡಬ್ಲ್ಯೂ ಆರ್ ಆರ್ 1000 ಸಿಸಿ ಬೈಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದಾರೆ.
ಶೇಕ್ ನಾಸಿರ್ ಮತ್ತು ಸೈಯದ್ ಮುದಾಸಿರ್ ಇಬ್ಬರು ಬೈಕ್ ಡೀಲರ್ಸ್. ಮುದಾಸಿರ್ ಓರ್ವ ಗ್ರಾಹಕನಿಗೆ ಬೈಕ್ ನೋಡುತ್ತಿದ್ದು, ಅದೇ ಬೈಕ್ ಪರ್ಮಾರ್ಫೆನ್ಸ್ ತೋರಿಸಲು ಶೇಕ್ ನಾಸಿರ್ ಆತನ ಬಳಿಗೆ ಬಂದಿದ್ದನು. ಮಾಧವ ಪಾರ್ಕ್ ಕಡೆಯಿಂದ ಅಶೋಕ ಪಿಲ್ಲರ್ ಕಡೆ ಬರುತ್ತಿದ್ದರು. ಈ ವೇಳೆ ಕನಕಪಾಳ್ಯ ಕಡೆಯಿಂದ ಬರ್ತಿದ್ದ ಬಲೆನೊ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ.
ಬೈಕ್ ಸವಾರರು ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಕುತ್ತಿಗೆಗೆ ತೀವ್ರ ಏಟು ಬಿದ್ದ ಕಾರಣ ಸ್ಥಳದಲ್ಲೇ ನಾಸಿರ್ ಸಾವಿಗೀಡಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮುದಾಸಿರ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.