ಇಸ್ಲಾಮಾಬಾದ್: ದೇಶದಲ್ಲಿ ಹೊಸ ವರ್ಷಾಚರಣೆ 2024 ನಿಷೇಧಿಸಲಾಗಿದೆ ಎಂದು ಹಂಗಾಮಿ ಪ್ರಧಾನ ಮಂತ್ರಿ ಅನ್ವಾರುಲ್ ಹಕ್ ಕಾಕರ್ ಘೋಷಿಸಿದ್ದಾರೆ.
ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಹೊಸ ವರ್ಷದ ಸಂಭ್ರಮ ಬೇಡ ಏಕೆಂದರೆ ಇಸ್ರೇಲ್-ಹಮಾಸ್ ಯುದ್ಧದಿಂದಾಗಿ ಗಾಜಾದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಗಾಜಾ ಜನರಿಗಾಗಿ ನಾವು ದನಿ ಎತ್ತಬೇಕು. ಅದಕ್ಕಾಗಿ ಒಗಟ್ಟು ಪ್ರದರ್ಶಿಸಬೇಕು ಆದ್ದರಿಂದ ಹೊಸವರ್ಷ ಆಚರಣೇ ಬೇಡ ಎಂದು ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ.
ಇಸ್ರೇಲಿ ಬಾಂಬ್ ದಾಳಿ ಪ್ರಾರಂಭವಾದಾಗಿನಿಂದ ಸುಮಾರು 9,000 ಮಕ್ಕಳು ಸೇರಿದಂತೆ 21,000 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಹತ್ಯೆಯಾಗಿದ್ದಾರೆ. ಹಿಂಸಾಚಾರ ಮತ್ತು ಅನ್ಯಾಯದ ಎಲ್ಲಾ ಮಿತಿಗಳನ್ನು ದಾಟಿದ ಇಸ್ರೇಲಿ ಪಡೆಗಳಿಂದ ಪ್ಯಾಲೆಸ್ತೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.