ಶ್ರೀನಗರ: ಜಮ್ಮು ಕಾಶ್ಮೀರದ ಕಿಶ್ತ್ವಾರದಲ್ಲಿ ಬೆಳಗ್ಗೆ 8.43ರ ಸುಮಾರಿಗೆ 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಭೂಕಂಪನದಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದು, ಈ ಭೂಕಂಪದ ಆಳವನ್ನು 5 ಕಿಲೋಮೀಟರ್ ಎಂದು ಅಳೆಯಲಾಗಿದೆ.
ಇನ್ನು ಚೀನಾದ ಜಿಜಾಂಗ್ ಪ್ರಾಂತ್ಯದಲ್ಲೂ ಬೆಳಗ್ಗೆ ಏಳು ಗಂಟೆಗೆ ಭೂಕಂಪನದ ಅನುಭವವಾಗಿದ್ದು, ಆ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.7 ಎಂದು ಅಳೆಯಲಾಗಿದೆ. ಸೋಮವಾರ ಸಂಜೆ ಅಸ್ಸಾಂನಲ್ಲಿ 3.6 ತೀವ್ರತೆಯ ಭೂಕಂಪನದ ಅನುಭವವಾಗಿದೆ.