ಸಹಕಾರಿ ಸಂಘಗಳಿಗೆ ರೈತರುಗಳು ಪ್ರತಿ ತಿಂಗಳು ಹಾಕುವ ಹಾಲಿಗೆ ಒಟ್ಟು ಪೂರೈಕೆ ಮಾಡಿದ ಹಾಲಿನ ಹಣವನ್ನು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನೀಡುತ್ತದೆ ಜೊತೆಗೆ ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ಒಟ್ಟು ಪೂರೈಕೆ ಮಾಡಿದ ಹಾಲಿನ ಪ್ರೋತ್ಸಾಹ ಧನವನ್ನು ಕೊಡಲಾಗುತ್ತದೆ.
KMF ಗೆ ರೈತರು ಹಳ್ಳಿ ಮಟ್ಟದಲ್ಲಿ ಸ್ಥಾಪನೆ ಮಾಡಿಕೊಂಡಿರುವ ಸಹಕಾರಿ ಹಾಲು ಸಂಘಗಳ ಮೂಲಕ ದಿನ ನಿತ್ಯ ಹಾಲನ್ನು ಪೂರೈಕೆ ಮಾಡಲಾಗುವುದು. ಆದರೆ ರೈತರು ಒಟ್ಟು ಪೂರೈಕೆ ಮಾಡುವ ಹಾಲಿಗೆ ಸರ್ಕಾರದಿಂದ ಯಾವ ತಿಂಗಳು ಎಷ್ಟು ಪ್ರೋತ್ಸಾಹ ಧನ ಬಂದಿದೆ ಎನ್ನುವ ಮಾಹಿತಿಯನ್ನು ಹೇಗೆ ತಿಳಿಯಬೇಕು ಎಂದು ಅನೇಕ ಜನರಿಗೆ ತಿಳಿದಿಲ್ಲ.
Step-1: ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಪ್ರವೇಶ ಮಾಡಿ. ಬಳಿಕ ಆ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು ಹಾಗೂ ಹಾಲಿನ ಮಂಡಲಿ, ವಿಭಾಗೀಯ ಕಚೇರಿ, ಹಳ್ಳಿ/ಸಂಘ ಅನ್ನು ಆಯ್ಕೆ ಮಾಡಿ “Submit” button ಮೇಲೆ ಕ್ಲಿಕ್ ಮಾಡಬೇಕು.
Step-2: “Submit” button ಮೇಲೆ ಕ್ಲಿಕ್ ಮಾಡಿದ ನಂತರ ಈ ಪುಟದಲ್ಲಿ ನೀವು ಪ್ರತಿ ನಿತ್ಯ ಹಾಲು ಪೂರೈಕೆ ಮಾಡುವ ಸಂಘದ ಎಲ್ಲಾ ಅರ್ಹ ಫಲಾನುಭವಿಗಳ ಪಟ್ಟಿ & ಹಾಲಿನ ಪ್ರೋತ್ಸಾಹ ಧನ ಎಷ್ಟು ಬಂದಿದೆ? ಒಟ್ಟು ಪೂರೈಕೆ ಮಾಡಿದ ಹಾಲಿನ ಮಾಹಿತಿಯನ್ನು ತೋರಿಸುತ್ತದೆ.
Step-3: ಮತ್ತೆ ಇದೆ ಪೇಜ್ ನಲ್ಲಿ ಕೊನೆಯಲ್ಲಿ ಕಾಣಿಸುವ 1.2.3.4.5 ಪೇಜ್ ಸಂಖ್ಯೆಯ ಮೇಲೆ click ಮಾಡಿ ಪಟ್ಟಿಯಲ್ಲಿರುವ ಎಲ್ಲಾ ಹೆಸರನ್ನು ನೋಡಬಹದು ಮತ್ತು ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಬಹುದು.