ದಿನಕ್ಕೊಂದು ಕ್ಯಾರೆಟ್, ಹೃದಯದ ಆರೋಗ್ಯಕ್ಕೆ ಒಳ್ಳೆಯದು..!

ಕೇಸರಿ ಬಣ್ಣದಲ್ಲಿ ಎಲ್ಲರ ಅಚ್ಚುಮೆಚ್ಚಿನ ತರಕಾರಿಯಾಗಿರುವ ಕ್ಯಾರೆಟ್, ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೊಡುವಂತಹ ತರಕಾರಿಯಾಗಿದೆ. ಪ್ರಮುಖವಾಗಿ ಹೃದಯದ.

ದೇಹದ ಪ್ರಮುಖ ಅಂಗಾಂಗಗಳಲ್ಲಿ ಒಂದಾದ ಪುಟ್ಟ ಹೃದಯ ಆರೋಗ್ಯಪೂರ್ಣವಾಗಿರಲು, ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು, ಸಮತೋಲನ ಆಹಾರಪದ್ಧತಿ ಹಾಗೂ ಜೀವನ ಶೈಲಿಯಲ್ಲಿನ ಬದಲಾವಣೆಗಳು. ಇವೆರಡೂ ಕೂಡ ಬಹಳ ಪ್ರಮುಖ ಅಸ್ತ್ರಗಳು. ಜೀವನ ಪರ್ಯಂತ ಈ ಎರಡೂ ಅಭ್ಯಾಸಗಳು ಯಾರು ಸರಿಯಾಗಿ ಅನುಸರಿಸಿಕೊಂಡು ಹೋಗುತ್ತಾರೆಯೋ, ಅವರಿಗೆ ಹೃದಯದ ಸಮಸ್ಯೆಗಳು ಕಂಡು ಬರುವ ಅಪಾಯ ಕಡಿಮೆ ಎಂದು ಹೇಳಬಹುದು.

ಹೃದಯದ ಆರೋಗ್ಯಕ್ಕೆ ನೈಸರ್ಗಿಕವಾಗಿ ಸಿಗುವ ಆಹಾರ ಪದಾರ್ಥಗಳ ಪ್ರಭಾವ ಹೆಚ್ಚು. ಉದಾಹರಣೆಗೆ ಹೇಳುವು ದಾದರೆ, ದಿನಾ ನೆನೆಸಿಟ್ಟ ಎರಡು-ಮೂರು ಬಾದಾಮಿ ಬೀಜಗಳ ಸೇವನೆ ಮಾಡಿದರೆ ಹೃದಯದ ಸಮಸ್ಯೆಗಳಿಂದ ದೂರವಿರಬಹುದು. ಆದರೆ ಕೇವಲ ಬಾದಾಮಿ ಮಾತ್ರವಲ್ಲ. ಇನ್ನೂ ಹಲವು ಆಹಾರಕ್ಕೆ ಹೃದಯದ ಆರೋಗ್ಯ ವನ್ನು ಕಾಪಾಡುವ ಶಕ್ತಿ ಇದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಕ್ಯಾರೆಟ್! ಹೌದು ಈ ಕೇಸರಿ ಬಣ್ಣದ ತರಕಾರಿಯನ್ನು ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬಳಸಿದರೆ, ಹೃದಯದ ಆರೋಗ್ಯ ಹೇಗೆಲ್ಲಾ ವೃದ್ಧಿಯಾ ಗುತ್ತದೆ ಎನ್ನುವುದರ ಬಗ್ಗೆ ನೋಡೋಣ…

Advertisement

ಸಂಶೋಧನೆಯ ಪ್ರಕಾರ

ಸಂಶೋಧನೆಯ ಪ್ರಕಾರ, ಕ್ಯಾರೆಟ್‌ನಲ್ಲಿ ಕಂಡು ಬರುವ ಬೀಟಾ-ಕ್ಯಾರೋಟಿನ್ ಎನ್ನುವ ಆರೋಗ್ಯಕಾರಿ ಅಂಶ ಗಳು, ರಕ್ತದಲ್ಲಿ ಕಂಡುಬರುವ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟ ವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದಯಕ್ಕೆ ರಕ್ತದ ಸಂಚಾರ ಸರಿಯಾಗಿ, ಪರೋಕ್ಷವಾಗಿ ಸಹಾಯ ಮಾಡುತ್ತದೆ.

ನಿಮಗೆ ಗೊತ್ತಿರಲಿ ದೇಹದಲ್ಲಿ ರಕ್ತದ ಸಂಚಾರ ಸರಿಯಾಗಿ ನಡೆದರೆ ಮಾತ್ರ, ಆರೋಗ್ಯದಲ್ಲಿ ನಮಗೆ ಯಾವುದೇ ತೊಂದರೆ ಇರುವುದಿಲ್ಲ.

ಇಲ್ಲದಿದ್ದರೆ, ಹೃದಯ ರಕ್ತನಾಳ ದಲ್ಲಿ ಸಮಸ್ಯೆಗಳು ಕಾಣಲು ಶುರುವಾಗುತ್ತದೆ. ಇದೇ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆ ಗಳು ಕಾಣಿಸಿಕೊಳ್ಳುತ್ತವೆ!

ಹೀಗಾಗಿ ತಮ್ಮ ಆಹಾರ ಕ್ರಮದಲ್ಲಿ ಕ್ಯಾರೆಟ್ ಅನ್ನು ಸೇರಿಸಿಕೊಳ್ಳುವುದರಿಂದ, ರಕ್ತನಾಳಗಳಲ್ಲಿ ರಕ್ತ ಪರಿ ಚಲನೆ ಸರಿಯಾಗಿ ನಡೆದು, ಹೃದಯದ ಆರೋಗ್ಯ ಸಮಸ್ಯೆಗಳು ಕ್ರಮೇಣವಾಗಿ ದೂರವಾಗುತ್ತವೆ.

ಪ್ರತಿದಿನ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯಿರಿ!

ನಮ್ಮ ಹೃದಯದ ಆರೋಗ್ಯಕ್ಕೆ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳಲು ನಾವು ಪ್ರತಿ ದಿನ ಒಂದು ಲೋಟ ಕ್ಯಾರೆಟ್ ಜ್ಯೂಸ್ ಸೇವನೆ ಮಾಡುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಇದರಿಂದ ಹೃದಯ ಬಡಿತ ನಿಯಂತ್ರ ಣವಾಗಿ ದೇಹದಲ್ಲಿ ಉತ್ತಮವಾದ ರಕ್ತದ ಒತ್ತಡ ಕಾಯ್ದು ಕೊಳ್ಳಲು ನೆರವಾ ಗುತ್ತದೆ.

ಇನ್ನು ಆರೋಗ್ಯ ತಜ್ಞರು ಹೇಳುವ ಪ್ರಕಾರ ಕ್ಯಾರೆಟ್ ಜ್ಯೂಸ್ ನಲ್ಲಿ ಪೊಟಾಶಿಯಂ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಕಂಡುಬರುವುದರಿಂದ, ಇವು ರಕ್ತದೊತ್ತಡ ತಗ್ಗಿಸು ವುದು ಮಾತ್ರವಲ್ಲದೆ, ಹೃದಯ ಸಮಸ್ಯೆಯ ಅಪಾಯ ವನ್ನು ಕೂಡ ಕಡಿಮ ಮಾಡುತ್ತದೆ ಎಂದು ಸಲಹೆ ನೀಡುತ್ತಾರೆ.​

ರಕ್ತದೊತ್ತಡವನ್ನು ನಿಯಂತ್ರಣ ಮಾಡಿ-ಹೃದಯವನ್ನು ಕಾಪಾಡುತ್ತೆ!

ಕ್ಯಾರೆಟ್‪ನಲ್ಲಿ ಬಿಟಾ ಕ್ಯಾರೋಟೀನ್ ಹಾಗೂ ವಿಟಮಿನ್ ಎ ಅಂಶ ಕಂಡು ಬರುವುದರ ಜೊತೆಗೆ ಆಂಟಿ ಇಂಫ್ಲ ಮೇಟರಿ ಗುಣ ಲಕ್ಷಣಗಳು ಕೂಡ ಯಥೇಚ್ಛವಾಗಿ ಕಂಡು ಬರುವುದರಿಂದ, ರಕ್ತನಾಳಗಳ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ.

ಇದರಿಂದ ಹೃದಯದ ಮೇಲಿನ ಒತ್ತಡ ಸಹ ಕಡಿಮೆಯಾ ಗುತ್ತದೆ. ಪ್ರಮುಖವಾಗಿ ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ಈ ಕೇಸರಿ ಬಣ್ಣದ ತರಕಾರಿ ತುಂಬಾನೇ ಉಪಯೋಗಕಾರಿ ಎಂದು ಹೇಳಲಾಗುತ್ತದೆ. ಇದರಿಂದ ಹೃದಯದ ಆರೋಗ್ಯ ಕೂಡ ಸುಧಾರಣೆ ಗೊಳ್ಳುತ್ತದೆ.

ಕ್ಯಾರೆಟ್ ಸೇವನೆಯ ವಿಧಾನ

ನೈಸರ್ಗಿಕ ಸಿಹಿ ಅಂಶ ಹೊಂದಿರುವ ಕ್ಯಾರೆಟ್ ಅನ್ನು ಹಸಿಯಾ ಗಿಯೂ ತಿನ್ನಬಹುದು, ಇಲ್ಲಾಂದ್ರೆ ಸಾರು, ಸಾಂಬಾರ್ ಗಳಲ್ಲಿನ ತರಕಾರಿಯಾಗಿ ಬಳಸಬಹುದು, ಈ ತರಕಾರಿಯನ್ನು ಬೇರೆ ತರಕಾರಿಗಳ ಜೊತೆಗೆ ಸಲಾಡ್ ರೀತಿ ಮಾಡಿಯೂ ಕೂಡ ಸೇವನೆ ಮಾಡಬಹುದು ಅಥವಾ ಸಣ್ಣದಾಗಿ ಕತ್ತರಿಸಿ, ಜ್ಯೂಸ್ ರೀತಿ ಮಾಡಿಯೂ ಕೂಡ ಕುಡಿಯಬಹುದು. ಹೀಗೆ ಯಾವುದೇ ರೀತಿಯಲ್ಲೂ ಸೇವಿಸಿದರೂ ಪ್ರಯೋಜನ ದೊರಕುವುದಂತೂ ಖಚಿತ.

ಹೃದಯದ ಆರೋಗ್ಯಕ್ಕೆ ಸಲಹೆಗಳು

ಪ್ರತಿದಿನ 30 ನಿಮಿಷಗಳ ಕಾಲ ವಾಕಿಂಗ್ ಮಾಡಿದರೆ ಹೃದಯದ ಸಮಸ್ಯೆ ಶೇಕಡ 40% ಕಡಿಮೆಯಾಗುತ್ತದೆ ಎಂದು ಆಯುರ್ವೇ ವೈದ್ಯರಾದ ಡಾ. ವರಲಕ್ಷ್ಮಿ ಅವರು ಸಲಹೆ ನೀಡುತ್ತಾರೆ.

ಅಷ್ಟೇ ಅಲ್ಲದೆ ರಕ್ತದೊತ್ತಡ, ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಹಾಗೂ ದೇಹದ ತೂಕ, ಇವೆಲ್ಲವೂ ಕೂಡ ನಿಯಂತ್ರಣಕ್ಕೆ ಬರುತ್ತದೆ.

ಸಂಸ್ಕರಿಸಿದ ಆಹಾರಗಳು, ಹೆಚ್ಚು ಉಪ್ಪಿನಾಂಶ ಇರುವ ಆಹಾರ ಪದಾರ್ಥಗಳಿಂದ ದೂರವಿದ್ದರೆ ಒಳ್ಳೆಯದು. ಯಾಕೆಂದ್ರೆ ಇಂತಹ ಆಹಾರ ಪದಾರ್ಥಗಳು ರಕ್ತದೊತ್ತಡ ವನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಆದಷ್ಟು ಹಣ್ಣು-ತರಕಾರಿಗಳನ್ನು ಸೇವನೆ ಮಾಡಿ, ಕೊಬ್ಬಿನಾಂಶಇರುವ ಆಹಾರ ಪದಾರ್ಥಗಳಿಂದ ದೂರವಿರಿ.

ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಶುಗರ್ ಪ್ರಮಾಣದ ಮೇಲೆ ಯಾವಾಗಲೂ ಗಮನವಿಡಿ! ಯಾಕೆಂದ್ರೆ ಇವೆಲ್ಲಾ ಸೈಲೆಂಟ್ ಕಿಲ್ಲರ್ ಕಾಯಿಲೆಗಳು, ಒಂದು ವೇಳೆ ಇವುಗಳ ಪ್ರಮಾಣ ದೇಹದಲ್ಲಿ ಹೆಚ್ಚಾಗಿ ಬಿಟ್ಟರೆ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement