ಕೊಲಂಬೊ: ಶ್ರೀಲಂಕಾದ ಸಮುದ್ರ ಗಡಿ ಒಳ ಪ್ರವೇಶಿಸಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 19 ಭಾರತೀಯ ಮೀನುಗಾರರನ್ನು ಗುರುವಾರ ಮುಂಜಾನೆ ಬಂಧಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ.
ಮಾಹಿತಿ ಪ್ರಕಾರ, ಉತ್ತರ ಜಾಫ್ನಾ ಪ್ರಾಂತ್ಯದ ಡೆಲ್ಫ್ಟ್ ದ್ವೀಪದ ಬಳಿ ಬುಧವಾರ ಕಾರ್ಯಾಚರಣೆ ನಡೆಸಿದ ಶ್ರೀಲಂಕಾ ಕರಾವಳಿ ಗಸ್ತು ಪಡೆ ಮತ್ತು ನೌಕಾಪಡೆಯು, ದ್ವೀಪದ ಬಳಿ ಅಕ್ರಮವಾಗಿ ಮೀನುಗಾರಿಗೆ ನಡೆಸುತ್ತಿದ್ದ 19 ಭಾರತೀಯ ಮೀನುಗಾರರು ಮತ್ತು 2 ಭಾರತೀಯ ಪ್ರಯಾಣಿಕರನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಕಂಕಸಂತುರೈ ಬಂದರಿಗೆ ಕರೆದೊಯ್ಯಲಾಗಿತು ಎಂದು ತಿಳಿದು ಬಂದಿದೆ.
ಇನ್ನು ನಾಲ್ಕು ದಿನಗಳ ಹಿಂದೆಯಷ್ಟೇ ತಮಿಳುನಾಡಿನ 23 ಮೀನುಗಾರರನ್ನು ಶ್ರೀಲಂಕಾ ನೌಕಪಡೆ ಬಂದಿಸಿತ್ತು. ಇದನ್ನು ತಮಿಳುನಾಡಿದ ಹಲವು ರಾಜಕೀಯ ಪಕ್ಷಗಳು ಬಂಧನವನ್ನು ಖಂಡಿಸಿದ್ದು, ಮೀನುಗಾರರನ್ನು ಶ್ರೀಲಂಕಾ ದೇಶದಿಂದ ಬಿಡುಗಡೆ ಮಾಡಿಸುವಂತೆ ಭಾರತದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.