ದೆಹಲಿ: ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ದೂರು ಸಲ್ಲಿಸುವುದು ಸೇರಿದಂತೆ ವಿವಿಧ ಸೇವೆಗಳ ಮಾಹಿತಿಗಾಗಿ ಭಾರತೀಯ ರೈಲ್ವೇ ಇಲಾಖೆಯು ಒಂದೇ “139” ಟೋಲ್ ಫ್ರೀ ಸಹಾಯವಾಣಿ ಪ್ರಾರಂಭಿಸಿದೆ.
ಪ್ರಯಾಣಿಕರಿಗೆ ಎಲ್ಲಾ ರೀತಿಯ ಪ್ರಶ್ನೆಗಳು, ದೂರುಗಳು, ಸಹಾಯಕ್ಕಾಗಿ ಸಂಯೋಜಿತ ‘ರೈಲ್ ಮದದ್’ ಸಂಖ್ಯೆ “139”ಕ್ಕೆ ಕರೆ ಮಾಡಿ ದೂರನ್ನು ನೋಂದಾಯಿಸಬಹುದು.
ಈ ಹಿಂದೆ ಇದ್ದ 182 ಸಹಾಯವಾಣಿ ಸಂಖ್ಯೆ ಸ್ಥಗಿತಗೊಳಿಸಿ 139 ಅನ್ನು ವಿಲೀನಗೊಳಿಸಲಾಗಿತ್ತು. ಒಟ್ಟು 12 ಭಾರತೀಯ ಭಾಷೆಗಳಲ್ಲಿ ಈ ಸೇವೆ ಲಭ್ಯವಿದೆ.