ದೆಹಲಿ: ಬಾಲಿವುಡ್ ಚಿತ್ರ ಸಾಹಿತಿಯಾಗಿ ಗುರುತಿಸಿಕೊಂಡಿರುವ ಉರ್ದು ಕವಿ ಗುಲ್ಟಾರ್ ಹಾಗೂ ಮಧ್ಯ ಪ್ರದೇಶದ ಚಿತ್ರಕೂಟದ ತುಳಸಿ ಪೀಠದ ಜಗದ್ಗುರು ರಾಮಭದ್ರಾಚಾರ್ಯ ಅವರು 58ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆಂದು ಜ್ಞಾನಪೀಠ ಆಯ್ಕೆ ಸಮಿತಿಯು ಘೋಷಿಸಿದೆ.
ಗುಲ್ಬಾರ್ ಅವರಿಗೆ 2002ರಲ್ಲಿ ಸಾಹಿತ್ಯ ಅಕಾಡೆಮಿ, 2004ರಲ್ಲಿ ಪದ್ಮಭೂಷಣ, 2013ರಲ್ಲಿ ದಾದಾಸಾಹೇಬ್ ಫಾಲ್ಕೆ ಹಾಗೂ 5 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳೂ ಒಲಿದು ಬಂದಿವೆ.