ಕೇಂದ್ರ ಸರಕಾರದ ಆಯುಷ್ಮಾನ್ ಯೋಜನೆಯ ಅಡಿಯಲ್ಲಿ ಕೇವಲ ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಉಚಿತ ಚಿಕಿತ್ಸೆಗೆ ಅವಕಾಶವಿದೆ.
ಬಿಪಿಎಲ್ ಕಾರ್ಡು ಹೊಂದಿರುವವರು 5 ಲಕ್ಷ ರೂಪಾಯಿ ಹಾಗೂ ಎಪಿಎಲ್ ಕಾರ್ಡುದಾರರು ಅಥವಾ ಕಾರ್ಡು ಹೊಂದದೇ ಇರುವವರು ಕೂಡ 1.5 -2 ಲಕ್ಷ ರೂಪಾಯಿಯ ವರೆಗೆ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶವಿದೆ.
ನೀವು abdm.gov.in / ಗೆ ಭೇಟಿ ನೀಡುವ ಮೂಲಕ ನೀವು ಆಯುಷ್ಮಾನ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.