ಬೆಂಗಳೂರು: ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಯತ್ನಾಳ್ ನನ್ನ ಬಗ್ಗೆ ಯಾವಾಗಲೂ ಒಳ್ಳೆಯದನ್ನೇ ಹೇಳುತ್ತಿರುತ್ತಾರೆ, ಈಗಲೂ ಅದನ್ನೇ ಮಾಡಿದ್ದಾರೆ ಎಂದರು. ಬಳಿಕ ನೀವು ಸಿಎಂ ಆಗುವವರಲ್ಲವೇ ಯತ್ನಾಳ್? ಎಂದು ಪ್ರಶ್ನಿಸಿದರು. ಆಗ ಶಾಸಕರು, ಅಡ್ಡಸ್ಟ್ ಮೆಂಟ್ ರಾಜಕಾರಣಿಗಳು ಇರುವವರೆಗೆ ನಾನು ಆಗಲ್ಲವೆಂದು ಗೊತ್ತಿದೆ ಎಂದರು.