ದೆಹಲಿ; ಸುಪ್ರೀಂ ಕೋರ್ಟ್ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ (95) ನಿಧನರಾಗಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ಅವರು ರಾಜ್ಯದ ಪರವಾಗಿ ವಾದ ಮಂಡಿಸಿದ್ದ ಅವರು, ಆರ್ಟಿಕಲ್ 370 ರದ್ದತಿ ಪ್ರಕರಣದಲ್ಲೂ ವಾದವನ್ನು ಮಂಡಿಸಿದ್ದರು.
1950ರಲ್ಲಿ ಬಾಂಬೆ ಹೈಕೋರ್ಟ್‌ಗೆ ವಕೀಲರಾಗಿ ಸೇರಿದ್ದ ಅವರು, 1972ರಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು. 1991ರಲ್ಲಿ ಪದ್ಮಭೂಷಣ, 2007ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು. 1999-2005ರ ನಡುವೆ ರಾಜ್ಯಸಭಾ ಸದಸ್ಯರಾಗಿದ್ದರು.