DL,LLR ಲೈಸೆನ್ಸ್ ಅವಧಿಯನ್ನು ಫೆಬ್ರವರಿ 29 ರವರೆಗೆ ವಿಸ್ತರಿಸಲಾಗಿದೆ.
ಸಾರಥಿ ಪೋರ್ಟಲ್ ನಲ್ಲಿ ಮೂಲಸೌಕರ್ಯ ಸಂಬಂಧ ಸಮಸ್ಯೆ ಉಂಟಾದ ಕಾರಣ ವಾಹನ ಕಲಿಕಾ ಪರವಾನಿಗೆ, ಚಾಲನಾ ಪರವಾನಿಗೆ, ಕಂಡಕ್ಟರ್ ಪರವಾನಿಗೆ ಮಾನ್ಯತೆಯನ್ನು ಫೆಬ್ರ ವರಿ 29ರವರೆಗೆ ವಿಸ್ತರಿಸಿ ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವಾಲಯ ಆದೇಶ ಹೊಡಡಿಸಿದೆ. 2024ರ ಜನವರಿ 31ರಿಂದ ಫೆಬ್ರವರಿ 15ರ ನಡುವೆ ಮುಕ್ತಾಯಗೊಂಡ ಪರವಾನಿಗೆ ಸಿಂಧುತ್ವವನ್ನು 2024ರ ಫೆಬ್ರವರಿ 29ರವರೆಗೆ ಯಾವುದೇ ದಂಡ ವಿಧಿಸದೆ ಮಾನ್ಯವೆಂದು ಪರಿಗಣಿಸಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.