ನವದೆಹಲಿ: ‘ಬಿನಾಕಾ ಗೀತ್ ಮಾಲಾ’ ಎಂಬ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ್ದ ರೇಡಿಯೊ ನಿರೂಪಕ ಅಮೀನ್ ಸಯಾನಿ ನಿಧನರಾಗಿದ್ದಾರೆ.
ಅವರಿಗೆ 91 ವರ್ಷ ವಯಸ್ಸಾಗಿತ್ತು. ಅವರ ಪುತ್ರ ರಾಜಿಲ್ ಸಯಾನಿ ತಂದೆಯ ಸಾವನ್ನು ಖಚಿತಪಡಿಸಿದ್ದಾರೆ. ಮಂಗಳವಾರ ರಾತ್ರಿ ಅಮೀನ್ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಮುಂಬೈನ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪುತ್ರ ರಾಜಿಲ್ ಸಯಾನಿ ಹೇಳಿದ್ದಾರೆ.