ನವದೆಹಲಿ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಅವರು ಶೇಕಡಾ 77.5 ರಷ್ಟು ಅಂಕ ಪಡೆದು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಹೌದು. ಅಮೆರಿಕ ಮೂಲದ ಗ್ಲೋಬಲ್ ಡಿಸಿಶನ್ ಇಂಟಲಿಜೆನ್ಸಿ ಎಜೆನ್ಸಿ ಆಗಿರುವ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸುವ ವಿಶ್ವದ ಅತೀ ಜನಪ್ರಿಯ ನಾಯಕರ ಸಮೀಕ್ಷಾ ವರದಿಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನ ಪಡೆದಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಶೇಕಡಾ 37 ಅಪ್ರೂವಲ್ ರೇಟಿಂಗ್ನೊಂದಿಗೆ 9ನೇ ಸ್ಥಾನದಲ್ಲಿದ್ದಾರೆ. ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗ ಬಿಡುಗಡೆಯಾಗಿರುವ ಈ ಅಧ್ಯಯನ ವರದಿ ಬಿಜೆಪಿಯ ಉತ್ಸಾಹ ಮತ್ತಷ್ಟು ಡಬಲ್ ಮಾಡಿದೆ. ಜನವರಿ 30 ರಿಂದ ಫೆಬ್ರವರಿ 5ರವರೆಗೆ ಅವಧಿಯಲ್ಲಿ ಮಾರ್ನಿಂಗ್ ಕನ್ಸಲ್ಟ್ ಈ ಅಧ್ಯಯನ ಸಮೀಕ್ಷೆ ನಡೆಸಿದೆ. ಇದೀಗ ಮತ್ತೆ ಪ್ರಧಾನಿ ಮೋದಿಯೋ ವಿಶ್ವದ ಜನಪ್ರಿಯ ನಾಯಕ ಅನ್ನೋದು ಮತ್ತೆ ಸಾಬೀತಾಗಿದೆ. ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೆ ಮಾನ್ಯುಯೆಲ್ ಲೊಪೆಜ್ 64.5 ಶೇಕಡಾ ಅಪ್ರೂವಲ್ ರೇಟಿಂಗ್ ಮೂಲಕ 2ನೇ ಸ್ಥಾನದಲ್ಲಿದ್ದಾರೆ.
ಇನ್ನು ಬ್ರಿಟನ್ ಪ್ರಧಾನಿ ರಿಶಿ ಸುನಕ್ ಶೇಕಡಾ 27 ರಷ್ಟು ಅಪ್ರೂವಲ್ ರೇಟಿಂಗ್ನೊಂದಿಗೆ 12 ಸ್ಥಾನದಲ್ಲಿದ್ದಾರೆ. ಜರ್ಮನಿಯ ಚಾನ್ಸಲರ್ ಒಲಾಫ್ ಸ್ಕೂಲ್ಜ್ ಶೇಕಡಾ 20 ರಷ್ಟು ಅಪ್ರೂವಲ್ ರೇಟಿಂಗ್ನೊಂದಿಗೆ 15ನೇ ಸ್ಥಾನದಲ್ಲಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಸರ್ವೇ ವರದಿ ಬಹಿರಂಗವಾದ ಬೆನ್ನಲ್ಲೇ ಜಾಗತೀಕ ಮಟ್ಟದ ರಾಜಕೀಯ ವಿಶ್ಲೇಷಕರು, ಮಾಜಿ ರಾಯಭಾರಿಗಳು ಪಾಶ್ಚಿಮಾತ್ಯ ದೇಶಗಳ ಮಾಧ್ಯಮಗಳಿಗೆ ತಿಳಿ ಹೇಳಿದ್ದಾರೆ. ಪ್ರಧಾನಿ ಮೋದಿ ಸತತ ಜನಪ್ರಿಯ ನಾಯಕ ಪಟ್ಟ ಮುಡಿಗೇರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಶೇಕಡಾ 77 ರಷ್ಟು ಅಪ್ರೋವಲ್ ರೇಟಿಂಗ್ ಪಡೆದಿದ್ದಾರೆ. ಹೀಗಾಗಿ ಸದಾ ಮೋದಿ ವಿರುದ್ಧ ನೆಗೆಟೀವ್ ಸುದ್ದಿಗಳನ್ನೇ ಬಿತ್ತರ ಮಾಡುವ ಮಾಧ್ಯಮಗಳೇ ಅವರ ಪಾಸಿಟೀವ್ ಕುರಿತು ಜನರಿಗೆ ತೋರಿಸಿ ಎಂದು ಪಾಶ್ಚಿಮಾತ್ಯ ಮಾಧ್ಯಮಗಳ ಕಾಲೆಳೆದಿದ್ದಾರೆ. 2023ರ ಡಿಸೆಂಬರ್ ತಿಂಗಳಲ್ಲಿ ಮಾರ್ನಿಂಗ್ ಕನ್ಸಲ್ಟ್ ಬಿಡುಗಡೆ ಮಾಡಿದ್ದ ವರದಿಯಲ್ಲೂ ಮೋದಿ ವಿಶ್ವದ ನ.1 ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿದ್ದರು. ಈವೇಳೆ ಮೋದಿ ಶೇಕಡಾ 76 ರಷ್ಟು ಅಪ್ರೂವಲ್ ರೇಟಿಂಗ್ ಪಡೆದಿದ್ದಾರೆ. ಇದೀಗ ಮೋದಿ ರೇಟಿಂಗ್ ಮತ್ತೆ ಹೆಚ್ಚಾಗಿದೆ.