ಸಿಬಿಎಸ್‌ಇಯ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ನೋಟ್ಸ್ ನೋಡಿಕೊಂಡೇ ಪರೀಕ್ಷೆ ಬರೆಯಲು ಅವಕಾಶ ನೀಡುವ “ತೆರೆದ ಪುಸ್ತಕ ಪರೀಕ್ಷೆ” ಅನ್ನು ಈ ವರ್ಷ ನಡೆಸಲು ನಿರ್ಧರಿಸಲಾಗಿದೆ.
ಈ ಪ್ರಾಯೋಗಿಕ ಪರೀಕ್ಷೆಯನ್ನು ದೇಶವ್ಯಾಪಿ ಆಯ್ದ ಶಾಲೆಗಳಲ್ಲಿ ಮಾತ್ರವೇ ಆಯೋಜಿಸಲಾಗುತ್ತಿದೆ. ರಾಷ್ಟ್ರೀಯ ಪಠ್ಯ ಚೌಕಟ್ಟಿನ ಶಿಫಾರಸಿನ ಅನ್ವಯ ಈ ಪ್ರಾಯೋಗಿಕ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಆದರೆ, ಇದನ್ನು ಬೋರ್ಡ್ ಎಕ್ಸಾಂ ವೇಳೆ ಬಳಕೆ ಮಾಡುವುದಿಲ್ಲ.
ಎಂದು ಸಿಬಿಎಸ್‌ಇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.