ತ್ಚಚೆಯ ಎಲ್ಲಾ ಸಮಸ್ಯೆಗಳಿಗೆ ಈ ವಿಟಮಿನ್ ಒಂದೇ ಮದ್ದು

ವಿಟಮಿನ್ ಸಿ ಯ ಪ್ರಮುಖ ಪ್ರಯೋಜನಗಳಲ್ಲಿ ಫೋಟೊಪ್ರೊಟೆಕ್ಷನ್ ಒಂದು. ಇದರರ್ಥ ಮೂಲಭೂತವಾಗಿ ವಿಟಮಿನ್ ಸಿ ಸೂರ್ಯನ ಕಠಿಣ ಕಿರಣಗಳಿಂದ ಉಂಟಾಗುವ ಹಾನಿಯಿಂದ ನಿಮ್ಮನ್ನು ಉಳಿಸುತ್ತದೆ.

ಇಂದಿನ ಕಾಲದಲ್ಲಿ ಮುಖ ತೊಳೆಯುವ ಫೇಸ್ ವಾಶ್ ನಿಂದ ಹಿಡಿದು, ಫೇಸ್ ಮಾಸ್ಕ್, ಕ್ರೀಮ್ ಗಳವರೆಗೂ ಸೌಂದರ್ಯ ಸಾಧನವಾಗಿ ಬಳಸುವ ಪ್ರತಿಯೊಂದು ಉತ್ಪನ್ನಗಳಲ್ಲಿಯೂ ವಿಟಮಿನ್ ಸಿ ಇರುವುದು. ಈ ವಿಟಮಿನ್ ಸಿ ತ್ವಚೆಯ ರಕ್ಷಣೆಗೆ ಬಳಸುವ ಉತ್ಪನ್ನಗಳಲ್ಲಿ ಅತ್ಯಂತ ಜನಪ್ರಿಯ ನೈಸರ್ಗಿಕ ಸಾರಗಳಲ್ಲಿ ಒಂದಾಗಿದೆ. ಗ್ರಾಹಕರು ಹಿಂದೆಂದಿಗಿಂತಲೂ ಹೆಚ್ಚು ವಿದ್ಯಾವಂತರು ಮತ್ತು ಸೌಂದರ್ಯ ಜಾಗೃತರಾಗಿರುವುದರಿಂದ, ನೈಸರ್ಗಿಕ ಸಾರಗಳಿಂದ ಸಮೃದ್ಧವಾಗಿರುವ ಉತ್ಪನ್ನಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಹಾಗಾದರೆ ಅದರ ಪ್ರಯೋಜನಗಳೇನು ಎಂಬುದನ್ನು ನೊಡೋಣ.

ಸೂರ್ಯನ ಕಿರಣಗಳಿಂದ ಆಗುವ ಹಾನಿಯನ್ನು ತಡೆಯುವುದು:

Advertisement

ವಿಟಮಿನ್ ಸಿ ಯ ಪ್ರಮುಖ ಪ್ರಯೋಜನಗಳಲ್ಲಿ ಫೋಟೊಪ್ರೊಟೆಕ್ಷನ್ ಒಂದು. ಇದರರ್ಥ ಮೂಲಭೂತವಾಗಿ ವಿಟಮಿನ್ ಸಿ ಸೂರ್ಯನ ಕಠಿಣ ಕಿರಣಗಳಿಂದ ಉಂಟಾಗುವ ಹಾನಿಯಿಂದ ನಿಮ್ಮನ್ನು ಉಳಿಸುತ್ತದೆ. ಇದಲ್ಲದೆ, ಈ ಹಿಂದೆ ಸುರ್ಯನ ಕಿರಣಗಳಿಂದ ಆದ ಹಾನಿಯನ್ನು ಸರಿ ಮಾಡಿ, ಕೋಮಲ ತ್ವಚೆಯನ್ನು ನೀಡುವುದು.

ಕಲೆಯನ್ನು ಕಡಿಮೆ ಮಾಡುವುದು:

ಮುಖದ ಮೇಲಿನ ಕಲೆಗಳು ಅಥವಾ ಚರ್ಮದ ಬಣ್ಣವನ್ನು ಬದಲಾಗಲು ಸಾಕಷ್ಟು ಕಾರಣಗಳಿವೆ. ವಯಸ್ಸಾಗುವಿಕೆ, ವಿಟಮಿನ್ ಕೊರತೆ ಅಥವಾ ಪೋಷಕಾಂಶಗಳ ಕೊರತೆ ಹೀಗೆ. ಆದರೆ ವಿಟಮಿನ್ ಸಿ ಹೆಚ್ಚು ಈ ಕಲೆಗಳನ್ನು ಕಡಿಮೆ ಮಾಡಿ. ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಆದಕ್ಕೆ ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಅನ್ನು ಹೆಚ್ಚೆಚ್ಚು ಸೇರಿಸಿ.

ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುವುದು:

ತ್ವಚೆಯ ಮೇಲೆ ಉಂಟಾಗುವ ರೇಖೆಗಳು ವಯಸ್ಸಾಗುವಿಕೆಯ ಪರಿಣಾಮವಾಗಿರಬಹುದು. ಆದರೆ ವಿಟಮಿನ್ ಸಿ ಸೀರಮ್ ಗಳ ನಿಯಮಿತ ಬಳಕೆಯಿಮದ ನಿಮ್ಮ ಸುಕ್ಕಾಗುವಿಕೆ ಅಥವಾ ಸೂಕ್ಷ್ಮ ರೇಖೆಗಳು ಉಂಟಾಗುವುದನ್ನು ಬಹಳ ಸಮಯ ಮುಂದೂಡಬಹುದು. ಈ ಗೆರೆಗಳನ್ನು ಮರೆಯಾಗಿಸುವ ಮತ್ತು ಯಾವುದೇ ಚಿಂತೆಯಿಲ್ಲದೆ ಕಿರುನಗೆ ಬಿರಲು ನಿಮಗೆ ಸಹಾಯ ಮಾಡುವ ಮಾರ್ಗ ಇದಾಗಿದೆ.

ಹೈಡ್ರೇಟಿಂಗ್ ಮಾಡುವುದು:

ವಿಟಮಿನ್ ಸಿ ಚರ್ಮವನ್ನು ಆಳವಾಗಿ ಹೈಡ್ರೇಟ್ ಮಾಡುವುದಲ್ಲದೇ, ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಉತ್ತಮ ಜಲಸಂಚಯನವು ಆರೋಗ್ಯಕರ ಚರ್ಮದ ಅತ್ಯಂತ ಮುಖ್ಯ ಅಂಶವಾಗಿದೆ. ಆದ್ದರಿಂದ ವಿಟಮಿನ್ ಸಿ ಇರುವ ಫೇಸ್ ಮಾಸ್ಕ, ಹಣ್ಣಿನ ಸಿಪ್ಪೆಯ ಮಾಸ್ಕ, ಕ್ರೀಮ್ ಗಳ ಕಡೆಗೆ ಹೆಚ್ಚು ಗಮನ ಕೊಡಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement