ಬ್ರುಸೆಲ್ಸ್: ರಷ್ಯಾ ಮತ್ತು ಉಕ್ರೇನ್ ಯುದ್ದ ಆರಂಭವಾಗಿ ಈಗಾಗಲೇ 2 ವರ್ಷ ಪೂರೈಸಿವೆ. ಯುದ್ದದಿಂದಾಗಿ ಉಕ್ರೇನ್ ಈಗ ಭಾರಿ ಸಂಕಷ್ಟಕ್ಕೆ ಸಿಲುಕಿದೆ. ಈ ನಿಟ್ಟಿನಲ್ಲಿ ನ್ಯಾಟೋ ಪಡೆಗಳು ಖುದ್ದಾಗಿ ಯುದ್ದ ಭೂಮಿ ಪ್ರವೇಶಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇದೀಗ ಈ ಬಗ್ಗೆ ನ್ಯಾಟೋ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ‘ನ್ಯಾಟೋ’ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್ ಬರ್ಗ್ ಅವರು, ನ್ಯಾಟೋ ಮಿತ್ರರಾಷ್ಟ್ರಗಳು ಉಕ್ರೇನ್‌ಗೆ 2014ರಿಂದ ನಿರಂತರ ಬೆಂಬಲ & ಸಹಕಾರ ನೀಡಿವೆ. ಆದರೆ ಇದೀಗ ನ್ಯಾಟೊ ಪಡೆಗಳನ್ನು ನೇರವಾಗಿ ಯುದ್ಧ ಭೂಮಿಗೆ ಕಳುಹಿಸುವ ಯಾವುದೇ ಚಿಂತನೆ ಇಲ್ಲ ಎಂದಿದ್ದಾರೆ.
ಇನ್ನು ಉಕ್ರೇನ್ ವಿರುದ್ಧ ರಷ್ಯಾವು ಯುದ್ದವನ್ನು ತೀವ್ರಗೊಳಿಸುವ ಮೂಲಕ ಅಂತರರಾಷ್ಟೀಯ ಕಾನೂನನ್ನು ಉಲ್ಲಂಘಿಸುತ್ತಿದೆ. ಈ ನಿಟ್ಟಿನಲ್ಲಿ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಉಕ್ರೇನ್ ಗೆ ಇದೆ. ಇದರ ಜೊತೆಗೆ ಈ ಹಕ್ಕನ್ನು ಎತ್ತಿ ಹಿಡಿಯುವುದು ನಮ್ಮ ಜವಾಬ್ದಾರಿ ಎಂದು ಸ್ಟೋಲ್ಟೆನ್ ಬರ್ಗ್ ತಿಳಿಸಿದ್ದಾರೆ.