ಪಡಿತರ ವಿತರಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ಪ್ರತಿ ಕೆಜಿ ಅಕ್ಕಿಗೆ ನೀಡುವ ಕಮಿಷನ್ ಮೊತ್ತವನ್ನು 1.50 ರೂ.ಗೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗ ಪ್ರತಿ ಕೆಜಿ ಅಕ್ಕಿಗೆ 1.24 ರೂ. ಕಮಿಷನ್ ಇದೆ. ಪಡಿತರ ವಿತರಕರ ಸಮಸ್ಯೆ ಗಮನಿಸಿದ್ದೇನೆ.
ಸಚಿವ ಮುನಿಯಪ್ಪ ಅವರೂ ಈ ಬಗ್ಗೆ ಮನವಿ ಮಾಡಿದ್ದಾರೆ. ಎಲ್ಲ ಅಂಶ ಪರಿಗಣಿಸಿ ಕಮಿಷನ್ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.