ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯನವರ ವಿರುದ್ದವೇ ಸ್ಪರ್ಧಿಸಿ ವಿ.ಸೋಮಣ್ಣ ಸೋತಾರು ಬಳಿಕ ಬಿ.ಎಸ್ ಯಡಿಯೂರಪ್ಪ ಹಾಗೂ ವಿ ಸೋಮಣ್ಣ ನಡುವೆ ವೈಮನಸ್ಸು ಬೆಳೆಯಿತು.
ಈಗ ಲೋಕಸಭೆ ಚುನಾವಣೆಗೆ ಹತ್ತಿರವಾಗುತ್ತಿದ್ದಂತೆ ಡಾಲರ್ಸ್ ಕಾಲನಿಯ ಬಿ.ಎಸ್ ಯಡಿಯೂರಪ್ಪನವರ ನಿವಾಸಕ್ಕೆ ವಿ ಸೋಮಣ್ಣ ಅವರು ಭೇಟಿ ನೀಡುವ ಮೂಲಕ ಮುನಿಸು ಮರೆತು ಒಂದಾಗಿದ್ದಾರೆ.
ಹೈಕಮಾಂಡ್ , ಕೇಂದ್ರ ಬಿಜೆಪಿ ನಾಯಕರು ಸಹ ಸೋಮಣ್ಣ, ಬಿಎಸ್‌ವೈ ನಡುವೆ ಮಾತುಕತೆ ನಡೆದಿದ್ದರು. ಇದೀಗ ವಿಧಾನಸಭೆ ಟಿಕೆಟ್ ಹಂಚಿಕೆ ವೇಳೆ ಶುರುವಾಗಿದ್ದ ಇಬ್ಬರ ನಡುವಿನ ವೈಮನಸ್ಸು ಅಂತ್ಯವಾಗಿದೆ. ಲೋಕಸಭೆ ಚುನಾವಣೆ ಸನಿಹದಲ್ಲೇ ಇಬ್ಬರು ಬಲಿಷ್ಠ ನಾಯಕರು ಜೊತೆಯಾಗಿದ್ದಾರೆ.
ವಸತಿ ಸಚಿವ ವಿ. ಸೋಮಣ್ಣ ಅವರನ್ನು ಸಿದ್ದರಾಮಯ್ಯ ವಿರುದ್ದ ಕಣಕ್ಕಿಳಿಸಿದರು. ಇದಾದ ಬಳಿಕ ಸೋಮಣ್ಣನವರು ಸ್ವಪಕ್ಷದವರ ವಿರುದ್ದವೇ ವಾಗ್ದಾಳಿ ನಡೆಸಿ ಅಸಮಾಧಾನ ಹೊರಹಾಕಿದರು. ಇದೀಗ ಇಬ್ಬರು ಭೇಟಿ ಮಾಡುವ ಮೂಲಕ ವೈಮನಸ್ಸಿಗೆ ಅಂತ್ಯ ಹಾಡಿದ್ದಾರೆ