ಗರಿ ಗರಿಯಾದ ಪಕೋಡಾ ಟೀ ಜತೆ ಸವಿಯುತ್ತಿದ್ದರೆ ಆಗುವ ಖುಷಿನೇ ಬೇರೆ. ಇಲ್ಲಿ ಸ್ವೀಟ್ ಕಾರ್ನ್ ಬಳಸಿ ಮಾಡುವ ಪಕೋಡ ಇದೆ ಮಾಡಿ ನೋಡಿ. 1 ಕಪ್ –ಸ್ವೀಟ್ ಕಾರ್ನ್ (ಕಾಳುಗಳನ್ನು ಬೇಯಿಸಿ ತರಿ ತರಿಯಾಗಿ ರುಬ್ಬಿಕೊಳ್ಳಿ), 1-ಈರುಳ್ಳಿ (ಚಿಕ್ಕದಾಗಿ ಕತ್ತರಿಸಿಕೊಳ್ಳಿ), ¼ ಕಪ್-ಕಡಲೆಹಿಟ್ಟು, 2-3- ಹಸಿಮೆಣಸು (ಚಿಕ್ಕದಾಗಿ ಕತ್ತರಿಸಿಕೊಳ್ಳಿ), ಅಕ್ಕಿ ಹಿಟ್ಟು-1 ಟೇಬಲ್ ಸ್ಪೂನ್, ¼ ಟೀ ಸ್ಪೂನ್-ಅರಿಶಿನ, 1 ಟೀ ಸ್ಪೂನ್-ಶುಂಠಿ, ಬೆಳ್ಳುಳ್ಳಿ ಪೇಸ್ಟ್, 1 ಟೀ ಸ್ಪೂನ್-ಚಾಟ್ ಮಸಾಲ, 1/4 ಕಪ್-ಕೊತ್ತಂಬರಿ ಸೊಪ್ಪು, ಕರಿಬೇವು-ಸ್ವಲ್ಪ (ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ), ½ ಟೀ ಸ್ಪೂನ್-ಜೀರಿಗೆ ಪುಡಿ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-ಕರಿಯಲು.
ಒಂದು ಬೌಲ್ ಗೆ ತರಿ ತರಿಯಾಗಿ ರುಬ್ಬಿದ ಕಾರ್ನ್ ಹಾಕಿ ನಂತರ ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಬೇವು, ಕೊತ್ತಂಬರಿ ಸೊಪ್ಪು,ಅರಿಶಿನ, ಚಾಟ್ ಮಸಾಲ, ಜೀರಿಗೆಪುಡಿ, ಕಡಲೆಹಿಟ್ಟು, ಅಕ್ಕಿ ಹಿಟ್ಟು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗ್ಯಾಸ್ ಮೇಲೆ ಎಣ್ಣೆ ಕಾಯಲು ಇಟ್ಟು ಸ್ವಲ್ಪ ಸ್ವಲ್ಪ ಹಿಟ್ಟು ಕೈಯಲ್ಲಿ ತೆಗೆದುಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರಗೆ ಕರಿಯಿರಿ.