ಐಪಿಎಸ್ ಅಧಿಕಾರಿಯಾದ ಆಶ್ನಾ ಚೌಧರಿ

ಲಕ್ನೋ: ತಾಳ್ಮೆ ಮತ್ತು ಆತ್ಮವಿಶ್ವಾಸದ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡವರಲ್ಲಿ ಐಪಿಎಸ್ ಆಶ್ನಾ ಚೌಧರಿ ಕೂಡಾ ಒಬ್ಬರು. ಸತತ ಸೋಲುಗಳನ್ನು ಕಂಡರೂ ಎದೆಗುಂದದೆ ಸವಾಲುಗಳನ್ನು ಎದುರಿಸಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರು

ಆಶ್ನಾ ಮೂಲತಃ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಪಿಲ್ಖುವಾ ಪಟ್ಟಣದವರು . ಆಕೆಯ ತಂದೆ ಡಾ. ಅಜಿತ್ ಚೌಧರಿ ಅವರು ಸರ್ಕಾರಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದರೆ,ಅವರ ತಾಯಿ ಇಂದೂ ಸಿಂಗ್ ಗೃಹಿಣಿಯಾಗಿದ್ದಾರೆ.

ಗಾಜಿಯಾಬಾದ್‌ನ ದೆಹಲಿ ಪಬ್ಲಿಕ್ ಸ್ಕೂಲ್, ಉದಯಪುರದ ಸೇಂಟ್ ಮೇರಿ ಶಾಲೆ ಮತ್ತು ಪಿಖುವಾದಲ್ಲಿನ ಸೇಂಟ್ ಕ್ಸೇವಿಯರ್‌ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ಅವರು, 12 ನೇ ತರಗತಿಯಲ್ಲಿ 96.5 ಸ್ಕೋರ್‌ ಗಳಿಸಿದ್ದರು. ದೆಹಲಿಯ ಗೌರವಾನ್ವಿತ ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್‌ಗೆ ದಾಖಲಾಗಿ ಪದವಿ ಪಡೆದರು.ನಂತರ ಅವರು ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಲ್ಲಿ ತಮ್ಮ ಅಂತರಾಷ್ಟ್ರೀಯ ಸಂಬಂಧಗಳ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಈ ಸಮಯದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಎನ್‌ಜಿಒ ಅನ್ನು ಸಹ ಅವರು ಬೆಂಬಲಿಸುತ್ತಿದ್ದರು.

Advertisement

ಇದಾದ ಬಳಿಕ ಅಂದರೆ 2019 ರಲ್ಲಿ ಪದವಿ ಮುಗಿಸಿದ ನಂತರ UPSC ಗೆ ತಯಾರಿ ಆರಂಭಿಸಿದರು. UPSC ಗಾಗಿ ಪ್ರಯತ್ನಿಸಲು ಸಲಹೆ ನೀಡಿದ ಅವರ ಕುಟುಂಬ ಸದಸ್ಯರಿಂದ ಅವರು ಸ್ಫೂರ್ತಿ ಪಡೆದರು. ಒಂದು ವರ್ಷದ ತಯಾರಿಯ ನಂತರ ಅವರು 2020 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಇದಾದ ಬಳಿಕ ಮತ್ತೆ 2021ರಲ್ಲಿ, ಅವರು ಪರೀಕ್ಷೆಯನ್ನು ಬರೆದರೂ ಅದನ್ನು ಭೇದಿಸಲು ಸಾಧ್ಯವಾಗಲಿಲ್ಲ.

ಆದಾಗ್ಯೂ, ಅವರು 2022 ರಲ್ಲಿ ತನ್ನ ಮೂರನೇ ಪ್ರಯತ್ನಕ್ಕಾಗಿ ಪಟ್ಟುಹಿಡಿದು ಅಭ್ಯಾಸ ಮಾಡಿದರು. ತಮ್ಮ ಮೇಲೆ ನಂಬಿಕೆ ಕಳೆದುಕೊಳ್ಳುವ ಬದಲು ಪರೀಕ್ಷೆಯಲ್ಲಿ ಎಲ್ಲಿ ತಪ್ಪಾಗಿದೆ ಎಂದು ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಎರಡು ಸೋಲುಗಳ ನಂತರ ಹೆಚ್ಚು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರು ಆಶ್ನಾ ಚೌಧರಿ. ಅಣಕು ಪರೀಕ್ಷೆಗಳನ್ನು ಅಭ್ಯಾಸ ಮಾಡುವುದರಿಂದ ಹಿಡಿದು ಸಕಲ ಪ್ರಯತ್ನ, ಅಭ್ಯಾಸ ಎಲ್ಲವನ್ನೂ ಮಾಡಿದರು.

ಅಂತಿಮವಾಗಿ,ಕಷ್ಟಕ್ಕೆ ಫಲ ಎನ್ನುವಂತೆ 2022ರಲ್ಲಿ, ಪರೀಕ್ಷೆ ಪಾಸ್‌ ಮಾಡಿದರು. ಹತ್ತು ಲಕ್ಷಕ್ಕೂ ಹೆಚ್ಚು ಅಬ್ಯರ್ಥಿಗಳಲ್ಲಿ 116 ನೇ ಸ್ಥಾನವನ್ನು ಪಡೆದರು. ಅವರು ಪ್ರಭಾವಶಾಲಿ 992 ಅಂಕಗಳೊಂದಿಗೆ ಭಾರತೀಯ ಪೊಲೀಸ್ ಸೇವೆಯಲ್ಲಿ (IPS) ಆಶ್ನಾ ಚೌಧರಿ ಅಧಿಕಾರಿಯಾಗಿದ್ದಾರೆ. ಅವರು Instagram ನಂತಹ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಅವರು 107K ಗಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement