ಮೈಸೂರು ಸಂಸದ ಪ್ರತಾಪ್ ಸಿಂಹ( Prathap simha) ಟಿಕೆಟ್ ಕೈ ತಪ್ಪಿದ ಬಳಿಕ ಯದುವೀರ್ ಒಡೆಯರ್(Yaduvir Odeyar) ಅವರಿಗೆ ಟಾಂಗ್ ನೀಡಿ ಪೋಸ್ಟ್‌ಗಳನ್ನು ಹಾಕಿದ್ರು. ಆದ್ರೆ, ಈಗ ಅವರ ಜೊತೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಆದರೊಂದಿಗೆ ಯಾವತ್ತೂ ಸಿದ್ಧರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡುತ್ತಿದ್ದ ಪ್ರತಾಪ್ ಸಿಂಹ ಇಂದು ಸಿಎಂ ಸಿದ್ದರಾಮಯ್ಯ(CM Siddaramaiya) ಅವರ ಹೇಳಿಕೆಯನ್ನು ಸರ್ಮಥಿಸಿಕೊಳ್ಳುವ ಕೆಲಸ ಮಾಡಿದ್ದಾರೆ.
ಮೈಸೂರು ಕೊಡುಗು ಲೋಕಸಭೆಗೆ(Parliament) ಅಭ್ಯರ್ಥಿಯಾಗಿರುವ ಯದುವೀರ್ ಒಡೆಯರ್ ಅವರು ಈಗಾಲೇ ಪ್ರಚಾರ ಆರಂಭಿಸಿದ್ದಾರೆ. ಆರಂಭದಲ್ಲಿ ವಿರೋಧಿಸಿದ್ದ ಪ್ರತಾಪ್ ಸಿಂಹ ಕೂಡಾ ಈಗ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿ, ‘ರಾಜರು ಅರಮನೆಯಲ್ಲಿ ಇರ್ತಾರೆ… ಜನರು ಬೀದಿಯಲ್ಲಿ ಇರ್ತಾರೆ’ ಅಂತ ಹೇಳಿ ಸಣ್ಣದೊಂದು ವಿವಾದ ಹುಟ್ಟು ಹಾಕಿದ್ದರು. ಇದೇ ಮಾತನ್ನು ಇದೀಗ ಸಿಎಂ ಸಿದ್ಧರಾಮಯ್ಯ ಕೂಡಾ ಆಡಿದ್ದು ‘ಯಾರು ರಾಜ ‘? ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಿಂಹ ಸಿಎಂ ಸರಿಯಾಗಿಯೇ ಹೇಳಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಸಿಎಂ ಸರಿಯಾಗಿ ಹೇಳಿದ್ದಾರೆ….
‘ಸಿಎಂ ಹೇಳಿಕೆಯಲ್ಲಿ ಯಾವುದೇ ಹುಳುಕು ಹುಡುಕುವ ಅಗತ್ಯ ಇಲ್ಲ ಅವರು ಸರಿಯಾಗಿಯೇ ಹೇಳಿದ್ದಾರೆ. ಸಂವಿಧಾನ(Constitution) ಜಾರಿಯಾದ ದಿನದಿಂದ ದೇಶದಲ್ಲಿ ರಾಜ (king) ಮಹಾರಾಜ ಅನ್ನೋ ಪರಿಕಲ್ಪನೆ ಇಲ್ಲ. ಯದುವೀರ್ ಈಗ ಬಿಜೆಪಿ ಅಭ್ಯರ್ಥಿ ಮಾತ್ರ’ ಅಂತ ಹೇಳಿಕೆ ನೀಡಿದ್ದಾರೆ.
ನವರಾತ್ರಿ ಸಮಯದಲ್ಲಿ ಅರಮನೆಯಲ್ಲಿ (Palace) ನಡೆಯೋದು ಅವರ ಖಾಸಗಿ ದರ್ಬಾರ್ ಕಾರ್ಯಕ್ರಮ ಅಂತ ಹೇಳುವ ಮೂಲಕ ಮತ್ತೊಮ್ಮೆ ಯುದುವೀರ್ ಅವರಿಗೆ ಟಾಂಗ್ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಈಗ ನೀವು ಅವರನ್ನು ಮಹರಾಜ ಅಂತ ಕರೆಯುತ್ತಿರೋ ಅಥವಾ ಬಿಜೆಪಿ ಅಭ್ಯರ್ಥಿ ಅಂತ ಕರೆಯುತ್ತೀರಾ ಅಂತ ಮಾಧ್ಯಮಕ್ಕೇ ಪ್ರಶ್ನೆ ಹಾಕಿದ್ದಾರೆ. ಹೀಗಾಗಿ ಸಿಎಂ ಸಿದ್ಧರಾಮಯ್ಯ ಅವರು ಹೇಳಿದ್ದು ಸರಿಯಾಗಿಯೇ ಇದೆ ಅಂತ ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ