ಪಾಕಿಸ್ತಾನ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷ ಶಹರ್ಯಾರ್ ಖಾನ್(89) ನಿಧನರಾಗಿದ್ದಾರೆ. 2000ರ ದಶಕದ ಆರಂಭದಲ್ಲಿ ಭಾರತದೊಂದಿಗೆ ಕ್ರಿಕೆಟ್ ಸಂಬಂಧವನ್ನು ಮರುಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಟೀಮ್ ಇಂಡಿಯಾ ಮಾಜಿ ನಾಯಕ ಮನ್ಸೂರ್ ಅಲಿಖಾನ್ ಪಟೌಡಿ ಅವರ ಸೋದರ ಸಂಬಂಧಿ ಆಗಿದ್ದ ಭೂಪಾಲ್ ಮೂಲದ ಪಾಕ್ ರಾಜತಾಂತ್ರಿಕ ಅಧಿಕಾರಿ ದೀರ್ಘಕಾಲ ಅನಾರೋಗ್ಯದಿಂದ ಬಳಲಿದ್ದರು. 1999ರ ಭಾರತ ಪ್ರವಾಸ ಹಾಗೂ 2003ರ ವಿಶ್ವಕಪ್ ವೇಳೆ ಪಾಕ್ ತಂಡದ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.