ಎಲೆಕೋಸು ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಶೇಷವಾಗಿ ತೂಕ ಇಳಿಸುವವರಿಗೆ ಇದರಿಂದ ತುಂಬಾನೇ ಲಾಭವಿದೆ. ಆದರೆ ಇಷ್ಟೆಲ್ಲಾ ಲಾಭಗಳನ್ನು ಹೊಂದಿರುವ ಈ ತರಕಾರಿಯ ಬಗ್ಗೆ ಹೆಚ್ಚಿನವರು ನಿರ್ಲಕ್ಷ್ಯ ಮಾಡುತ್ತಾರೆ.
ಆದರೆ ನಿಮಗೆ ಗೊತ್ತಿರಲಿ ಇತರ ತರಕಾರಿಗಳಿಗೆ ಹೋಲಿಸಿದರೆ, ಎಲೆಕೋಸು ಅಥವಾ ಕ್ಯಾಬೇಜ್ ನಲ್ಲಿ ತುಂಬಾನೇ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶಗಳನ್ನು ಹೊಂದಿದೆ. ಜೊತೆಗೆ ನಾರಿನಾಂಶದ ಕೂಡ ಯಥೇಚ್ಛವಾಗಿ ಕಂಡುಬರುವುದರಿಂದ, ದೇಹದ ತೂಕ ಇಳಸಿಕೊಳ್ಳಲು ನೆರವಾಗುತ್ತದೆ.
ಎಲೆಕೋಸು ಬಳಸಿ ತಯಾರಿಸುವ ಖಾದ್ಯ ಬಹಳ ರುಚಿ ಹಾಗೇ ಆರೋಗ್ಯಕರವೂ ಹೌದು. ಇದರಲ್ಲಿ ವಿಟಮಿನ್ ಎ, ಸಿ, ಇ, ಪೊಟ್ಯಾಶಿಯಂನಂತಹ ಪೋಷಕಾಂಶಗಳಿವೆ. ಇದನ್ನು ಚರ್ಮದ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಕೂಡ ಬಳಸಬಹುದು. ಎಲೆಕೋಸು ಹೀಗೆ ಬಳಸಿದಲ್ಲಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಹೊಳೆಯುವ ಚರ್ಮವನ್ನು ಪಡೆಯಲು 4 ಚಮಚ ಎಲೆಕೋಸು ಪೇಸ್ಟ್ ಗೆ 1 ಮೊಟ್ಟೆ, 1 ಚಮಚ ಜೇನುತುಪ್ಪ, 2 ಚಮಚ ಕಡಲೆ ಹಿಟ್ಟು, ನಿಂಬೆ ರಸ ½ ಚಮಚ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಮುಖವನ್ನು ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ. ತ್ವಚೆ ಸೌಂದರ್ಯ ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿಎಣ್ಣೆಯುಕ್ತ ಚರ್ಮವನ್ನು ನಿವಾರಿಸಲು 2 ಚಮಚ ಮೊಟ್ಟೆಯ ಬಿಳಿ ಲೋಳೆ, 1 ಚಮಚ ನಿಂಬೆ ರಸ, 4 ಚಮಚ ಎಲೆಕೋಸು ಪೇಸ್ಟ್ ಇವಿಷ್ಟನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಮುಖವನ್ನು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿ.