ಬೆಳಗಾವಿ ಜಿಲ್ಲಾ ನ್ಯಾಯಾಲಯವು ಶೀಘ್ರಲಿಪಿಗಾರರು ಗ್ರೇಡ್-111, ಬೆರಳಚ್ಚುಗಾರರು, ಆದೇಶ ಜಾರಿಕಾರ, ಜವಾನ್ ಸೇರಿ 41 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಆನ್‌ಲೈನ್ ಅರ್ಜಿ ಸಲ್ಲಿಸಲು ಏಪ್ರೀಲ್ 14 ಕೊನೆ ದಿನಾಂಕ. ಅಭ್ಯರ್ಥಿಗಳು 10ನೇ & 12ನೇ ತರಗತಿ, ಡಿಪ್ಲೊಮಾ ಕಮರ್ಸಿಯಲ್ ಪ್ರಾಕ್ಟೀಸ್ ಪರೀಕ್ಷೆ ಪೂರ್ಣಗೊಳಿಸಿರಬೇಕು.
ಹುದ್ದೆಗನುಸಾರ 17000- 52650/- ರೂ. ವೇತನವಿದ್ದು, ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷ ಮೀರಿರಬಾರದು(ವಯೋಮಿತಿ ಸಡಿಲಿಕೆ ಇದೆ).
ಹೆಚ್ಚಿನ ಮಾಹಿತಿಗಾಗಿ https://belagavi.dcourts.gov.in/online -recruitment/ ವೆಬ್ ಸೈಟ್ ಗೆ ಭೇಟಿ ನೀಡಿ.