ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯೋದು ಹಳೇ ಕಾಲದ ಪದ್ಧತಿ. ಆಯುರ್ವೇದದಲ್ಲೂ ಇದರ ಉಲ್ಲೇಖವಿದೆ.
ಈ ಹಳೆ ಕಾಲದ ಪದ್ಧತಿಯಿಂದಲೇ ಬೆರಗಾಗುವಂಥ ಆರೋಗ್ಯಕರ ಪರಿಣಾಮಗಳಿವೆ. ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ 8 ಗಂಟೆಗಳ ಬಳಿಕ ಕುಡಿಯಬೇಕು.
ಇದರಿಂದ ವಾತ, ಕಫ, ಪಿತ್ತ ನಿವಾರಣೆಯಾಗುತ್ತದೆ. ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ. ಅತಿಸಾರ, ಭೇದಿ, ಕಾಮಾಲೆ ವಿರುದ್ಧವೂ ಹೋರಾಡುತ್ತದೆ. ತಾಮ್ರ ಜೀರ್ಣಕ್ರಿಯೆಗೆ ಸಹಕಾರಿ. ತಾಮ್ರದ ಪಾತ್ರೆಯಲ್ಲಿನ ನೀರು ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
ತಾಮ್ರ ಕ್ಯಾನ್ಸರ್ ಹಾಗೂ ಅಧಿಕ ರಕ್ತದೊತ್ತಡ ತಡೆಗೂ ಉತ್ತಮ. ತಾಮ್ರ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಇದರಿಂದ ವಯಸ್ಸಾದಂತೆ ಕಾಣುವುದನ್ನು ತಡೆಯಬಹುದು.
ತಾಮ್ರದ ಪಾತ್ರೆಯಲ್ಲಿನ ನೀರನ್ನು ದಿನವೂ ಕುಡಿದಲ್ಲಿ ಇದು ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸುತ್ತದೆ. ತಾಮ್ರ ರಕ್ತಹೀನತೆಯನ್ನೂ ತಡೆಯುತ್ತದೆ. ದೇಹದಲ್ಲಿನ ಕೊಬ್ಬನ್ನು ಕರಗಿಸಲೂ ತಾಮ್ರ ಸಹಕಾರಿ. ಹೀಗಾಗಿ ತಾಮ್ರ ಉಪಯೋಗಿಸುವಿಕೆಯಿಂದ ತೂಕವೂ ಇಳಿಯುತ್ತದೆ.
ತಾಮ್ರದಲ್ಲಿ ನಂಜುನಿರೋಧಕ ಗುಣಗಳಿದ್ದು ಇದು ಗಾಯಗಳನ್ನು ಗುಣಪಡಿಸುವಲ್ಲಿ ಸಹಕಾರಿ.