ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಳನೀರು ಕುಡಿಯುವುದು ಸುರಕ್ಷಿತವಾಗಿದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ, ಗರ್ಭಿಣಿಯರಿಗೆ ಎಳನೀರು ಕುಡಿಯುವಂತೆ ಸಲಹೆ ನೀಡಲಾಗುವುದು.
ಬಾಯಾರಿಕೆಯಾದಾಗ ಒಂದು ಎಳನೀರು ಕುಡಿದರೆ ಬಾಯಾರಿಕೆ ನೀಗುವುದು ಮಾತ್ರವಲ್ಲ ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಪೋಷಕಾಂಶಗಳ ಆಗರವಾಗಿರುವ ಎಳನೀರು ಎಷ್ಟೊಂದು ಪ್ರಯೋಜನಕಾರಿ ಎಂಬುವುದು ಎಲ್ಲರಿಗೂ ಗೊತ್ತು. ಆದರೆ ಎಳನೀರು ಎಷ್ಟು ಹೊತ್ತಿಗೆ ಕುಡಿಯುವುದು ತುಂಬಾ ಒಳ್ಳೆಯೆಂಬುವುದು ಗೊತ್ತೇ?
ಅಲ್ಲದೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಳನೀರು ಕುಡಿಯುವುದು ಸುರಕ್ಷಿತವಾಗಿದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ, ಗರ್ಭಿಣಿಯರಿಗೆ ಎಳನೀರು ಕುಡಿಯುವಂತೆ ಸಲಹೆ ನೀಡಲಾಗುವುದು. ಆದರೆ ಕೆಲವೊಂದು ಆರೋಗ್ಯ ಸಮಸ್ಯೆ ಇರುವವರಿಗೆ ಎಳನೀರು ಕುಡಿಯಬಾರದು. ಇವೆಲ್ಲದರ ಬಗ್ಗೆ ವಿವರವಾದ ಮಾಹಿತಿ ಈ ಲೇಖನದಲ್ಲಿದೆ.
ಎಳನೀರು ಕುಡಿಯಲು ಅತ್ಯುತ್ತಮವಾದ ಸಮಯ
ಎಳನೀರನ್ನು ಇಂಥದ್ದೇ ಸಮಯದಲ್ಲಿ ಕುಡಿಯಬೇಕೆಂಬುವುದು ಇಲ್ಲ. ಯಾವ ಸಮಯದಲ್ಲಿ ಬೇಕಾದರೂ ಕುಡಿಯಬಹುದು. ಆದರೆ ಕೆಲವೊಂದು ನಿರ್ದಿಷ್ಟ ಸಮಯದಲ್ಲಿ ಕುಡಿದರೆ ನಿಮಗೆ ಇನ್ನೂ ಹೆಚ್ಚಿನ ಗುಣಗಳನ್ನು ಪಡೆಯಬಹುದು. ಎಳನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಒಳ್ಳೆಯದು.
ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ ದೊರೆಯುವ ಪ್ರಯೋಜನಗಳು
ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ ಅನ ಏಕ ಪ್ರಯೋಜನಗಳಿವೆ. ಎಳನೀರಿನಲ್ಲಿ ಲೌರಿಕ್ ಆಮ್ಲ ಇದ್ದು ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ, ಚಯಪಚಯ ಕ್ರಿಯೆಗೆ ಒಳ್ಳೆಯದು, ತೂಕ ಇಳಿಕೆಗೆ ಸಹಕಾರಿ. ಇನ್ನು ತ್ವಚೆಯ ಸೌಂದರ್ಯ ಹೆಚ್ಚಿಸುವಲ್ಲಿಯೂ ಸಹಕಾರಿ. ಇನ್ನು ಗರ್ಭಿಣಿಯರಿಗೆ ಎಳನೀರು ಕುಡಿಯುವಂತೆ ಸಲಹೆ ನೀಡಲಾಗುವುದು. ಎಳನೀರು ಕುಡಿಯುವುದರಿಂದ ನಿರ್ಜಲೀಕರಣ ಉಂಟಾಗದಂತೆ ತಡೆಗಟ್ಟಬಹುದು ಅಲ್ಲದೆ ಗರ್ಭಾವಸ್ಥೆಯಲ್ಲಿ ಕಾಡುವ ಎದೆಉರಿ ಮುಂತಾದ ಸಮಸ್ಯೆ ತಡೆಗಟ್ಟುವುದು.
ವ್ಯಾಯಾಮಕ್ಕಿಂತ ಮೊದಲು ಹಾಗೂ ನಂತರ
ಎಳನೀರನ್ನು ವ್ಯಾಯಾಮಕ್ಕೆ ಮೊದಲು ಅಥವಾ ನಂತರ ಕುಡಿದರೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ದೇಹಕ್ಕೆ ಶಕ್ತಿ ತುಂಬುವುದರಿಂದ ವರ್ಕ್‌ಔಟ್ ಮೊದಲು ಕುಡಿದರೆ ತುಂಬಾ ಹೊತ್ತು ವ್ಯಾಯಾಮ ಮಾಡಲು ಸಹಾಯವಾಗುವುದು. ವ್ಯಾಯಾಮದ ನಂತರ ಕುಡಿದರೆ ದೇಹಕ್ಕೆ ಶಕ್ತಿ ತುಂಬುವುದು.
ಮಲಗುವುದಕ್ಕೆ ಮುನ್ನ ಯಾರಿಗೆ ಒತ್ತಡದಿಂದಾಗಿ ನಿದ್ರಾಹೀನತೆ ಸಮಸ್ಯೆ ಇದೆಯೋ ಅವರು ಮಲಗುವ ಮುನ್ನ ಒಂದು ಎಳನೀರು ಕುಡಿದರೆ ಬೇಗನೆ ನಿದ್ದೆ ಬರುವುದು. ಮಲಗುವಾಗ ಎಳನೀರು ಕುಡಿಯುವುದರಿಂದ ಮಾರನೇಯ ದಿನ ಬೆಳಗ್ಗೆ ದೇಹದಲ್ಲಿರುವ ಕಶ್ಮಲಗಳು ಮಲ, ಮೂತ್ರದಲ್ಲಿ ಹೊರ ಹೋಗುವುದು, ಇದರಿಂದ ಕಿಡ್ನಿ ಸಂಬಂಧಿತ ಸಮಸ್ಯೆ ತಡೆಗಟ್ಟಬಹುದು.
ಹ್ಯಾಂಗೋವರ್ ತಡೆಗಟ್ಟಲು?
ತುಂಬಾ ಹ್ಯಾಂಗೋವರ್ ಇದ್ದಾಗ ಎಳನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕುಡಿದಾಗ ಹ್ಯಾಂಗೋವರ್ ಕಡಿಮೆಯಾಗುವುದು.
ಅಡ್ಡಪರಿಣಾಮಗಳಿವೆಯೇ?
ಎಳನೀರು ಕುಡಿಯುವುದರಿಂದ ಅಪಾಯಕಾರಿಯದ ಅಡ್ಡಪರಿಣಾಮವೇನೂ ಇಲ್ಲ, ಆದರೆ ಕೆಲವರಿಗೆ, ಕೆಲ ಬಗೆಯ ಆರೋಗ್ಯ ಸಮಸ್ಯೆ ಹೊಂದಿರುವವರೆಗೆ ಎಳನೀರು ಅಷ್ಟು ಒಳ್ಳೆಯದಲ್ಲ.
ಸಿಸ್ಟಿಕ್ ಫೈಬ್ರೋಸಿಸ್: ಈ ಸಮಸ್ಯೆಯಿದ್ದರೆ ದೇಹದಲ್ಲಿ ಉಪ್ಪಿನಂಶ ಡಿಮೆಯಾಗುವುದು. ದೇಹದಲ್ಲಿ ಉಪ್ಪಿನಂಶ ಹೆಚ್ಚಿಸಲು ಇಂಥವರು ಔಷಧಿ ತೆಗೆದುಕೊಳ್ಳಬೇಕು. ಎಳನೀರಿನಲ್ಲಿ ತುಂಬಾ ಕಡಿಮೆ ಸೋಡಿಯಂ ಇರುವುದರಿಂದ ಇಂಥವರಿಗೆ ಏನೂ ಪ್ರಯೋಜನವಿಲ್ಲ, ಕುಡಿದರೆ ಆದರೆ ಅಪಾಯವೇನೂ ಇಲ್ಲ.
ದೇಹದಲ್ಲಿ ಅತ್ಯಧಿಕ ಪೊಟ್ಯಾಷ್ಯಿಯಂ ಇದ್ದರೆ
ದೇಹದಲ್ಲಿ ಅತ್ಯಧಿಕ ಪೊಟ್ಯಾಷ್ಯಿಯಂ ಸಮಸ್ಯೆಯಿದ್ದವರು ಎಳನೀರು ಕುಡಿದರೆ ಪೊಟಾಷ್ಯಿಯಂ ಮತ್ತಷ್ಟು ಹೆಚ್ಚಾಗುವುದರಿಂದ ಕುಡಿಯಬಾರದು.
ಕಿಡ್ನಿ ಸಮಸ್ಯೆ ಇರುವವರು
ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಎಳನೀರು ಕುಡಿಯಬೇಡಿ ಅಥವಾ ನಿಮ್ಮ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಕುಡಿಯಬೇಕು?
ಸರ್ಜರಿ ಆದವರು
ಸರ್ಜರಿಗೆ ಮುನ್ನ ಹಾಗೂ ನಂತರ ರಕ್ತದೊತ್ತಡ ನಿಯಂತ್ರಣದಲ್ಲಿರಬೇಕು, ಹಾಗಾಗಿ ಸರ್ಜರಿ ಮಾಡಿಸುವ ಮುನ್ನ ಹಾಗೂ ನಂತರ ಎಳನೀರು ಕುಡಿಯಬಾರದು.