ಬೆಂಗಳೂರು: 2024ರ ಲೋಕಸಭಾ ಚುನಾವಣೆಯ ಮತಭೂಮಿಯಲ್ಲಿ ದಾಖಲೆಯ ಮಟ್ಟದಲ್ಲಿ ಕುರುಡು ಕಾಂಚಣ ಕುಣಿದಾಡಿದೆ.
ಚುನಾವಣಾ ಅಕ್ರಮ ಬೆನ್ನತ್ತಿ ಹೊರಟ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ನಗದು, ಚಿನ್ನ, ಮದ್ಯ ಸೇರಿ ₹357 ಕೋಟಿ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿದೆ. ಈ ಬಾರಿ ಮತದಾರರ ಮನಗೆಲ್ಲಲು ರಾಜಕಾರಣಿಗಳು ಮದ್ಯದ ಮೊರೆ ಹೋಗಿದ್ದು ಕಂಡು ಬಂದಿದ್ದು, ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಬರೋಬ್ಬರಿ 160 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನ ವಶಪಡಿಸಿಕೊಳ್ಳಲಾಗಿದೆ.
160.71 ಕೋಟಿ ರೂಪಾಯಿಯ ಮದ್ಯ, 56 ಕೋಟಿ ಮೌಲ್ಯದ ಬಂಗಾರ, 48 ಕೋಟಿ ರೂಪಾಯಿ ನಗದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7 ಕೋಟಿ ಮೌಲ್ಯದ ಇತರೆ ಗಿಫ್ಟ್ ವಸ್ತುಗಳನ್ನ ಕೂಡ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ 1.13 ಕೋಟಿ ರುಪಾಯಿ ಮೌಲ್ಯದ ಬೆಳ್ಳಿ, 0.09 ಕೋಟಿ ಮೌಲ್ಯದ ವಜ್ರ, ಇತರೆ 72 ಕೋಟಿ ಮೌಲ್ಯದ ವಸ್ತುಗಳು ಸೇರಿ ಒಟ್ಟು 357 ಕೋಟಿ ರೂಪಾಯಿ ಮೌಲ್ಯದ ಹಣ , ವಸ್ತುಗಳನ್ನ ಚುನಾವಣಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.