ಬೆಂಗಳೂರು: ಹಿರಿಯ ನಟ ದ್ವಾರಕೀಶ್ ಕುಟುಂಬಸ್ಥರಿಂದ ನಾರಾಯಣ ನೇತ್ರಾಲಯಕ್ಕೆ ನೇತ್ರದಾನ ಮಾಡಲಾಯಿತು.. ದ್ವಾರಕೀಶ್ ಅವರ ಕಣ್ಣುಗಳನ್ನ ಪಡೆದ ನಾರಾಯಣ ನೇತ್ರಾಲಯದ ವೈದ್ಯೆ ಡಾಕ್ಟರ್ ಶೈಲಜಾ ಇದು ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಎಂದು ಹಾಡಿ ಹೊಗಳಿದ್ದಾರೆ. ಇದರಿಂದ ಇನ್ನೊಬ್ಬರಿಗೆ ಕಣ್ಣು ಸಿಗುವ ಕೆಲಸವಾಗುತ್ತೆ ಅಂತ ಧನ್ಯವಾದ ಸೂಚಿಸಿದ್ದಾರೆ.
ಜೊತೆಗೆ ದ್ವಾರಕೀಶ್ ಅವರ ಕಣ್ಣುಗಳನ್ನ ನಾಳೆ ಪರೀಕ್ಷೆ ಮಾಡಲಾಗುತ್ತದೆ. ನಾಳೆಯೇ ಕಣ್ಣುಗಳ ಅವಶ್ಯಕತೆ ಇರುವವರಿಗೆ ಹಾಕಲಾಗುತ್ತೆ. 10 ಜನರಿಗೆ ಈ ಕಣ್ಣುಗಳಿಂದ ಅನುಕೂಲವಾಗುತ್ತದೆ ಎಂದರು. ಹಾಗೇ 12 ಗಂಟೆಯಾದರೂ 24 ಗಂಟೆಯಾದ್ರು ಕಣ್ಣನ್ನ ತೆಗೆದುಕೊಳ್ಳಬಹುದು ಕಣ್ಣಿನ ಜೀವಿತಾವಧಿ ಒಬ್ಬೊಬ್ಬರಿಗೆ ಭಿನ್ನವಾಗಿರುತ್ತದೆ ಅಂತ ತಿಳಿಸಿದ್ರು.