ಹಸಿ ಕೊಕ್ಕೋ ದರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದು, ಕೆಜಿಯೊಂದಕ್ಕೆ 300 ರೂ. ದಾಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕ್ಯಾಂಪ್ಕೋ ಸಂಸ್ಥೆಯಲ್ಲಿ 290-300 ರೂ. ರಂತೆ ಹಸಿ ಕೊಕ್ಕೋ ಖರೀದಿಸಲಾಗಿದೆ.
ಹೊರ ಮಾರುಕಟ್ಟೆಯಲ್ಲೂ ದರ 300ರ ಗಡಿ ದಾಟಿದೆ. ಹಾಗೆಯೇ ಕೇರಳದ ಇಡುಕ್ಕಿಯಲ್ಲಿ ಪ್ರತಿ ಕೆಜಿಗೆ 330 ರೂ. ಬೆಲೆಯಲ್ಲಿ ಖರೀದಿ ಮಾಡಲಾಗಿದೆ.
ಚಾಕಲೇಟ್ಗಳು ಮತ್ತು ಪೇಯಗಳ ತಯಾರಿಕೆಯಲ್ಲಿ ಕೊಕ್ಕೊ ಬಳಸಲಾಗುತ್ತಿದೆ. ದಾಸ್ತಾನು ಕುಸಿತವಾಗಿದ್ದು, ಬೇಡಿಕೆ ಹೆಚ್ಚಾಗುತ್ತಿರುವುದೇ ದರ ಏರಿಕೆಗೆ ಕಾರಣವಾಗಿದೆ.