ಹಾಸನ: ಹಾಸನದಲ್ಲಿ ಈ ಹಿಂದೆ ವಸಂತ್ ಎಂಬ ಕಾರ್ಮಿಕನನ್ನು ಬಲಿ ಪಡೆದು, ಸಾಕಷ್ಟು ಜನರ ಮೇಲೆ ದಾಳಿ ನಡೆಸಿದ ನರ ಹಂತಕ ಕಾಡಾನೆ ಕೊನೆಗೂ ಸೆರೆ ಸಿಕ್ಕಿದೆ.
ಅರಣ್ಯ ಇಲಾಖೆ ತಂಡವು, ಅಭಿಮನ್ಯು ನೇತೃತ್ವದಲ್ಲಿ ಹಂತಕ ಕಾಡಾನೆಯನ್ನು ಬೇಲೂರು ತಾಲ್ಲೂಕಿನ ವಾಟೇಹಳ್ಳಿಯ ಐಬಿಸಿ ಕಾಫಿ ತೋಟದಲ್ಲಿ ಸೆರೆ ಹಿಡಿದಿದೆ.
ಅಭಿಮನ್ಯು, ಪ್ರಶಾಂತ, ಸುಗ್ರೀವ, ಕರ್ನಾಟಕ ಭೀಮ, ಅಶ್ವತ್ಥಾಮ, ಮಹೇಂದ್ರ ಸೇರಿ ಎಂಟು ಆನೆಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಅಂತಿಮವಾಗಿ ಕಾಡಾನೆ ಕರಡಿಯನ್ನು ಸೆರೆ ಹಿಡಿಯಲಾಗಿದೆ.
 
				 
         
         
         
															 
                     
                     
                     
                     
                    


































 
    
    
        