ಬೀಜಿಂಗ್: ಸುಂಟರಗಾಳಿಗೆ ಐವರು ಮೃತಪಟ್ಟು, 33 ಮಂದಿ ಗಾಯಗೊಂಡ ಘಟನೆ ದಕ್ಷಿಣ ಚೀನಾದ ಗೌಂಗ್ ನಗರದಲ್ಲಿ ನಡೆದಿದೆ.
ಶನಿವಾರ ಮಧ್ಯಾಹ್ನ ನಗರದ ಬೈಯುನ್ ಜಿಲ್ಲೆಯಲ್ಲಿ ಪ್ರಬಲವಾದ ಸುಂಟರಗಾಳಿ ಬೀಸಿದ್ದು, 141 ಕಾರ್ಖಾನೆ ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಬೈಯುನ್ ಜಿಲ್ಲೆಯ ಲಿಯಾಂಗ್ವಿಯಾನ್ ಹಳ್ಳಿಯಲ್ಲಿರುವ ಹವಾಮಾನ ಕೇಂದ್ರದಲ್ಲಿ ಸೆಕೆಂಡಿಗೆ ಗರಿಷ್ಠ 20.6 ಮೀ. ಗಾಳಿ ದಾಖಲಾಗಿರುತ್ತದೆ.
ಸುಂಟರಗಾಳಿ ನಂತರ ದಕ್ಷಿಣ ಚೀನಾದಲ್ಲಿ ಭಾರಿ ಮಳೆ ಸುರಿದ್ದು, ಪರಿಣಾಮ ಪ್ರವಾಹ ಉಂಟಾಗಿದೆ. ಪ್ರವಾಹದಲ್ಲಿ ಸಿಲುಕಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯ ಚೀನಾ ಹವಾಮಾನ ಇಲಾಖೆಯು ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುತ್ತದೆ.