ಲಕ್ನೋ: ಕಾಂಗ್ರೆಸ್ ಅಧಿಕಾರಕ್ಕೇರಿದರೆ ಅಲ್ಪಸಂಖ್ಯಾತರಿಗೆ ಗೋಮಾಂಸ ಸೇವಿಸುವ ಹಕ್ಕನ್ನು ನೀಡುತ್ತದೆ. ಈ ಮೂಲಕ ಗೋಹತ್ಯೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಹಿಂದೂ ಧರ್ಮದಲ್ಲಿ ಗೋವನ್ನು ತಾಯಿಯಂತೆ ಪೂಜಿಸಲಾಗುತ್ತದೆ. ನಾಚಿಕೆ ಇಲ್ಲದ ಜನರು ಗೋಮಾಂಸ ತಿನ್ನುವ ಹಕ್ಕಿನ ಭರವಸೆ ನೀಡುತ್ತಾರೆ. ಭಾರತ ಇದಕ್ಕೆ ಎಂದಾದರೂ ಒಪ್ಪಿಕೊಳ್ಳುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ಅವರವರ ಇಷ್ಟದ ಆಹಾರ ತಿನ್ನುವ ಸ್ವಾತಂತ್ರ್ಯ ನೀಡಬೇಕು ಎಂದರೆ ಗೋಹತ್ಯೆಗೆ ಅವಕಾಶ ನೀಡುವ ಮಾತನಾಡುತ್ತಿದ್ದಾರೆ. ಈ ದೇಶದಲ್ಲಿ ಹಿಂದೂ ಸಮುದಾಯವು ಗೋಮಾಂಸವನ್ನು ಸಂಪೂರ್ಣವಾಗಿ ತ್ಯಜಿಸುತ್ತದೆ. ಹಿಂದೂಗಳು ಗೋವನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಈ ನಿಟ್ಟಿನಲ್ಲಿ ಮುಸ್ಲಿಮರಿಗೆ ವಿನಾಯಿತಿ ನೀಡುವ ಕಾಂಗ್ರೆಸ್ನ ಪ್ರಯತ್ನವು ಎಲ್ಲರಿಗೂ ಸ್ವೀಕಾರಾರ್ಹವಲ್ಲ ಎಂದು ಕಿಡಿಕಾರಿದ್ದಾರೆ.