ನವದೆಹಲಿ: ಬರೋಬ್ಬರಿ 600 ಕೋಟಿ ರೂ. ಮೌಲ್ಯದ 86 ಕೆಜಿ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಪಾಕ್ ಬೋಟ್ ಅನ್ನು ಭಾರತೀಯ ಕೋಸ್ಟ್ ಗಾರ್ಡ್ ವಶಕ್ಕೆ ಪಡೆದಿದೆ.
ಗುಪ್ತಚರ ಮಾಹಿತಿಯ ಮೇರೆಗೆ, ಕೋಸ್ಟ್ ಗಾರ್ಡ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಾರ್ಯಾಚರಣೆ ನಡೆಸಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಬೋಟ್ ಅನ್ನು ವಶಪಡಿಸಿಕೊಂಡಿದೆ.
ರಾತ್ರಿ ಸಮಯದಲ್ಲಿ, ಭಾರತೀಯ ಕೋಸ್ಟ್ ಗಾರ್ಡ್ ಸಮುದ್ರದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಮಾದಕ ವಸ್ತು ಸಾಗಿಸುತ್ತಿದ್ದ ಬೋಟ್ ನೊಂದಿಗೆ ಪಾಕ್ ಹಡಗಿನ 14 ಸಿಬ್ಬಂದಿಯನ್ನು ಕೂಡ ಬಂಧಿಸಲಾಗಿದೆ.