ಅಮರಾವತಿ: ಬಿಜೆಪಿ ಮತ್ತು ಜನಸೇನಾ ಸರ್ಕಾರ ಅಧಿಕಾರಕ್ಕೆ ಬಂದರೆ ಹಜ್ ಯಾತ್ರಿಕರಿಗೆ 1 ಲಕ್ಷ ರೂಪಾಯಿ ನೆರವು ನೀಡಲಾಗುವುದು ಎಂದು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಟಿಡಿಪಿ, ಬಿಜೆಪಿ ಮತ್ತು ಜನಸೇನೆ ಒಳಗೊಂಡ ಎನ್ಡಿಎ ಸರ್ಕಾರ ರಚನೆಯಾದ ತಕ್ಷಣ ಮೆಕ್ಕಾಗೆ ಹೋಗುವ ಮುಸ್ಲಿಮರಿಗೆ 1 ಲಕ್ಷ ರೂ. ನೀಡಲಾಗುವುದು. ಹೈದರಾಬಾದಿನ ಮುಸ್ಲಿಮರು ತಮ್ಮ ಸಮುದಾಯದ ಇತರ ಪ್ರದೇಶಗಳಿಗೆ ಹೋಲಿಸಿದರೆ ಬಹಳ ಮುಂದಿದ್ದಾರೆ. ಇದಕ್ಕೆ ಅವರು ತಮ್ಮ ಪಕ್ಷದ ನೀತಿಗಳಿಗೆ ಮನ್ನಣೆ ನೀಡುತ್ತಾರೆ ಎಂದು ಅವರು ತಿಳಿಸಿದರು.
ಇನ್ನು ವೈಎಸ್ಆರ್ಸಿಪಿ ಮುಖ್ಯಸ್ಥ ಮತ್ತು ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಕಳೆದ 5 ವರ್ಷಗಳಲ್ಲಿ ಒಂದೇ ಒಂದು ಮಸೀದಿ ನಿರ್ಮಾಣ ಮಾಡಲು ಪ್ರಯತ್ನಿಸಿಲ್ಲ. ಅಂತೆಯೇ, ವೈಎಸ್ಆರ್ಸಿಪಿ ಸರ್ಕಾರವು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಮತ್ತು ಕೇಂದ್ರ ಸರ್ಕಾರದ ಇತರ ಉಪಕ್ರಮಗಳಿಗೆ ಬೇಷರತ್ತಾದ ಬೆಂಬಲ ನೀಡಿದೆ ಎಂದರು.
 
				 
         
         
         
															 
                     
                     
                     
                    


































 
    
    
        