ಚಿತ್ರದುರ್ಗ: ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ವರ್ಗದ (ಎಸ್.ಟಿ) ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ ದಾಖಲಿಸಲು, ಪರಿಶಿಷ್ಟ ವರ್ಗಗಳ ಇಲಾಖೆ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಮೇ 9 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಮೇ 21 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.
5ನೇ ತರಗತಿಯಲ್ಲಿ ಶೇ. 60 ಕ್ಕಿಂತ ಹೆಚ್ಚು ಅಂಕಗಳಿಸಿರುವ ವಾರ್ಷಿಕವಾಗಿ, ಕುಟುಂಬದ ವರಮಾನ ರೂ.2.00 ಲಕ್ಷ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಧೃಡೀಕೃತ ಅಂಕಪಟ್ಟಿಯನ್ನು ಅರ್ಜಿ ಜೊತೆಗೆ ಕಡ್ಡಾಯವಾಗಿ ಲಗತ್ತಿಸಬೇಕು. ಮುಖ್ಯೋಪಾಧ್ಯಯರು ಕಡ್ಡಾಯವಾಗಿ ಶೇಕಡವಾರು ನಮೂದಿಸಿದ ಅಂಕಪಟ್ಟಿಯನ್ನು ಮಾತ್ರ ಆಯ್ಕೆ ಪರಿಗಣಿಸಲಾಗುವುದು. ಅಂಕಪಟ್ಟಿಯಲ್ಲಿನ ಗ್ರೇಡ್‍ಅನ್ನು ನಮೂದಿಸಿದ್ದಲ್ಲಿ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಅರ್ಹತಾ ಪರೀಕ್ಷಾ ಮೂಲಕ ವಿದ್ಯಾರ್ಥಿಗಳು ಆಯ್ಕೆ ಮಾಡಲಾಗುವುದು. ಪೆÇೀಷಕರು ಆಯ್ಕೆ ಮಾಡಿದ ಪ್ರತಿಷ್ಠಿತ ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಲಾಗುವುದು. ವಿದ್ಯಾರ್ಥಿಗಳ ಶುಲ್ಕ ಮತ್ತು ನಿರ್ವಹಣಾ ವೆಚ್ಚವನ್ನು ಸರ್ಕಾರದ ನಿಯಮಗಳ ಅಡಿ ಪ್ರವೇಶ ಪಡೆದ ಶಾಲೆಯು ನಿಗಧಿ ಪಡಿಸಿದ ದರದಲ್ಲಿ ನೀಡಲಾಗುವುದು.
ಆಯಾ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಚಿತ್ರದುರ್ಗ ನಗರದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಅರ್ಜಿ ಪಡೆದುಕೊಳ್ಳಬಹುದು. ಅಪೂರ್ಣಗೊಂಡ ಹಾಗೂ ಅವಧಿ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ