ಬೇಕಾಗುವ ಪದಾರ್ಥಗಳು…
- ಅಕ್ಕಿ ಹಿಟ್ಟು- 3 ಬಟ್ಟಲು
- ತೆಂಗಿನಕಾಯಿ ತುರಿ- ಅರ್ಧ ಬಟ್ಟಲು
- ಎಳ್ಳು- ಅರ್ಧ ಚಮಚ
- ಜೀರಿಗೆ- ಅರ್ಧ ಚಮಚ
- ಬೆಣ್ಣೆ- ಅರ್ಧ ಚಮಚ
- ಅರಿಶಿನ- ಚಿಟಕೆಯಷ್ಟು
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ- ಕರಿಯಲು ಅಗತ್ಯವಿರುವಷ್ಟು
- ಅಕ್ಕಿ ಹಿಟ್ಟನ್ನು ನೀರು ಹಾಕಿ ಹದಕ್ಕೆ ಕಲೆಸಿಕೊಳ್ಳಬೇಕು, ನಂತರ ತೆಂಗಿನ ತುರಿ, ಎಳ್ಳು, ಜೀರಿಗೆ, ಉಪ್ಪು, ಅರಿಶಿನ ಹಾಕಿ ನಾದಬೇಕು.
- ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ನಾದಿದ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ತೆಳ್ಳಗೆ ತಟ್ಟಿ ಎಣ್ಣೆಯಲ್ಲಿ ಕರಿದರೆ ರುಚಿಯಾದ ತೆಂಗಿನಕಾಯಿ ವಡೆ ಸವಿಯಲು ಸಿದ್ದ.