ಚೆನೈ:ತಮಿಳಿನ ಖ್ಯಾತ ಗಾಯಕಿ ಉಮಾ ರಮಣನ್ ನಿಧನರಾಗಿದ್ದಾರೆ. ಅವರು 69ನೇ ವಯಸ್ಸಿಗೆ ಉಮಾ ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ.
ತಮಿಳಿನಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳಿಗೆ ಉಮಾ ಧ್ವನಿ ನೀಡಿದ್ದರು. ಇನ್ನೂ ಅವರ ಸಾವಿನ ಹಿಂದಿನ ಕಾರಣ ತಿಳಿದು ಬಂದಿಲ್ಲ.ಶಾಸ್ತ್ರಿಯ ಸಂಗೀತ ಕಲಿತು ಗಾಯನದಲ್ಲಿ ಹೆಸರು ಮಾಡಿರುವ ಉಮಾ 35 ವರ್ಷಗಳಲ್ಲಿ 6000ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.
ಇಳಯರಾಜ ಸಂಗೀತದಲ್ಲಿ ಉಮಾ ರಮಣನ್ ಸಾಕಷ್ಟು ಹಿಟ್ ಸಾಂಗ್‌ಗಳನ್ನು ನೀಡಿದ್ದಾರೆ. ಸದ್ಯ ಗಾಯಕಿಯ ನಿಧನಕ್ಕೆ ಆಪ್ತರು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.