ತೈಪೆ: ಚೀನಾದ 7 ಮಿಲಿಟರಿ ವಿಮಾನಗಳು ಮತ್ತು 5 ಯುದ್ಧನೌಕೆಗಳು ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6ಗಂಟೆವರೆಗೆ ತೈವಾನ್ ಸುತ್ತ ಕಾರ್ಯಾಚರಣೆ ನಡೆಸಿರುವುದನ್ನು ತೈವಾನ್‌ನ ರಕ್ಷಣಾ ಸಚಿವಾಲಯ (ಎಂಎನ್‌ಡಿ) ಪತ್ತೆ ಹಚ್ಚಿದೆ.
7 ಮಿಲಿಟರಿ ವಿಮಾನಗಳ ಪೈಕಿ ಒಂದು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿ ತೈವಾನ್‌ನ ನೈಋತ್ಯ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿದೆ. ಚೀನಾದ ಆಕ್ರಮಣಕಾರಿ ವರ್ತನೆಯನ್ನು ತೈವಾನ್‌ನ ಸಶಸ್ತ್ರ ಪಡೆಗಳು ಮೇಲ್ವಿಚಾರಣೆ ನಡೆಸಿವೆ. ಬಳಿಕ, ಯುದ್ಧ ಗಸ್ತು ವಿಮಾನಗಳು, ಹಡಗುಗಳು ಮತ್ತು ಕರಾವಳಿ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ ಎಂದು ತೈವಾನ್‌ನ ಎಂಎನ್‌ಡಿ ತಿಳಿಸಿದೆ.
ಇನ್ನು ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಶನಿವಾರ 6 ಗಂಟೆಯವರೆಗೂ ಚೀನಾದ 9 ವಿಮಾನಗಳು ಮತ್ತು ಐದು ಹಡಗುಗಳು ತೈವಾನ್ ಸುತ್ತ ಕಾರ್ಯಾಚರಣೆಯಲ್ಲಿ ತೊಡಗಿತ್ತು ಎನ್ನಲಾಗಿದೆ.