ಧಾರವಾಡ: ಧಾರವಾಡದಲ್ಲಿ ಈಚೆಗೆ ಜರುಗಿದಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತಿನ ಪ್ರಥಮ ಮಹಾಧಿವೇಶನದಲ್ಲಿ, ಚಿತ್ರದುರ್ಗದಶಾಸನ-ಸಂಶೋಧಕಡಾ. ಬಿ. ರಾಜಶೇಖರಪ್ಪನವರಿಗೆ “ಪ್ರೊ. ಶಿ.ಚೆ. ನಂದೀಮಠ ಶಾಸನ ಸಾಹಿತ್ಯ ಶ್ರೀ” ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಾಧ್ಯಾಪಕಡಾ. ಬಾಳೇಶ ಚಿನಗುಡಿಅವರು ಸ್ಥಾಪಿಸಿರುವ ಈ ಪ್ರಶಸ್ತಿ ರೂ. 5,000 ನಗದು, ಅಭಿನಂದನ ಪತ್ರ, ಸ್ಮರಣಿಕೆಗಳೊಂದಿಗೆ ಸನ್ಮಾನ ಪೂರ್ವಕವಾಗಿ ನೀಡಲಾಯಿತು.
ಪರಿಷತ್ತಿನಅಧ್ಯಕ್ಷರೂ ಶಾಸನ – ಸಂಶೋಧಕರೂಆದ ಶ್ರೀಮತಿ ಹನುಮಾಕ್ಷಿ ಗೋಗಿ, ಪರಿಷತ್ತಿನಉಪಾಧ್ಯಕ್ಷರೂ, ಇತಿಹಾಸ ಸಂಶೋಧಕರೂಆದಡಾ. ಶರಣಗೌಡ ಪಾಟೀಲರೂ ಮತ್ತುಜನತಾ ಶಿಕ್ಷಣ ಸಮಿಇಯಡಾ. ಅಜಿತ್‌ಪ್ರಸಾದ್‌ಅವರು ಈ ಮಾಹಿತಿಯನ್ನು ತಿಳಿಸಿರುತ್ತಾರೆ.
ಈ ಪ್ರಥಮ ಮಹಾಧೀವೇಶನದ ಸರ್ವಾಧ್ಯಕ್ಷತೆ ವಹಿಸಿದ್ದವರು ಕನ್ನಡ ವಿಶ್ವ ವಿದ್ಯಾಲಯ ಹಂಪಿಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು. ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತು, ರಾಷ್ಟಿçÃಯದೃಶ್ಯಕಲಾಅಕಾಡೆಮಿ ಮತ್ತುಜನತಾ ಶಿಕ್ಷಣ ಸಮಿತಿಜಂಟಿಯಾಗಿ ಆಯೋಜಿಸಿದ್ದ ಈ ಮಹಾಧಿವೇಶನ 2024ರ ಎಪ್ರಿಲ್ 29 ಮತ್ತು 30 ರಂದುಜರುಗಿತು. ಶಾಸನಗಳನ್ನು ಕುರಿತುಆಹ್ವಾನಿತರಿಂದದತ್ತಿ ಉಪನ್ಯಾಸಗಳಲ್ಲದೆ, ಕೆಲವರುಆಸಕ್ತರು ಮತ್ತು ವಿದ್ಯಾರ್ಥಿಗಳು ಕೂಡಾ ಕೆಲವು ಸಂಪ್ರಬAಧಗಳನ್ನು ಮಂಡಿಸಿದರು.
ಪ್ರಶಸ್ತಿಯ ಹೆಸರಿನ ಪ್ರೊ. ಶಿ.ಚೆ. ನಂದೀಮಠಅವರು ಸಂಸ್ಕೃತ ವಿದ್ವಾಂಸರಿದ್ದರಲ್ಲದೆ, ಇಂಗ್ಲೆAಡಿನಲ್ಲಿ ವೀರಶೈವ – ಲಿಂಗಾಯತಧರ್ಮದ ಬಗ್ಗೆ ಸಂಶೋಧನ ಮಹಾ ಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪಡೆದಿದ್ದವರು. ಅಷ್ಟೇ ಅಲ್ಲ, ಡಾ. ಡಿ.ಸಿ. ಪಾವಟೆಯವರ ಸಮಕಾಲೀನರಾಗಿದ್ದರಲ್ಲದೆಕರ್ನಾಟಕ ವಿಶ್ವ ವಿದ್ಯಾಲಯದ ಸ್ಥಾಪನೆಗೆ ತಳಹದಿ ಹಾಕಿದ ಮಹನೀಯರಲ್ಲೊಬ್ಬರು. ಇಂಥವರ ಹೆಸರಲ್ಲಿ ಸ್ಥಾಪಿತವಾಗಿರುವ ಈ ಪ್ರಶಸ್ತಿ (ಇದೇ ಮೊದಲನೇ ಬಾರಿಯ ಪ್ರಶಸ್ತಿ) ಡಾ. ಬಿ. ರಾಜಶೇಖರಪ್ಪ ನವರಿಗೆ ಸಲ್ಲುತ್ತಿರುವುದು, ಚಿತ್ರದುರ್ಗದವರಿಗೆ ಹೆಮ್ಮೆ ಪಡುವ ಸಂಗತಿಯಾಗಿದೆ.
ಈ ಸಂದರ್ಭದಲ್ಲಿಕರ್ನಾಟಕಇತಿಹಾಸಅಕಾಡೆಮಿಯಅಧ್ಯಕ್ಷಡಾ. ದೇವರಕೊಂಡಾರೆಡ್ಡಿ, ಪರಿಷತ್ತಿನಡಾ. ಮಹಾದೇವಿ ಹಿರೇಮಠ, ಡಾ. ಬಿ.ವಿ. ಶಿರೂರ, ಪ್ರೊ. ಎಸ್.ಬಿ. ಹಿರೇಮಠ, ಡಾ. ಲಕ್ಷö್ಮಣ್‌ತೆಲಗಾವಿ ಮುಂತಾದವರು ಹಾಜರಿದ್ದರು.