ಮಧುಮೇಹ ನಿಯಂತ್ರಣದಲ್ಲಿ ಪರಿಣಾಮಕಾರಿ ಈ ಮೂರು ಬಗೆಯ ಸೊಪ್ಪುಗಳು

ಸಾಮಾನ್ಯವಾಗಿ ನಾವು ಪ್ರತಿದಿನ ಸೇವಿಸುವ ಹಲವು ಬಗೆಯ ಸೊಪ್ಪು ತರಕಾರಿಗಳ ಆರೋಗ್ಯ ಮಹತ್ವಗಳು ನಮಗೆ ತಿಳಿದೇ ಇರುವುದಿಲ್ಲ! ಆದರೆ ನಿಮಗೆ ಗೊತ್ತಿರಲಿ.

ನಿಮಗೆ ಗೊತ್ತಿರಲಿ ಯಾರು ಮಾನಸಿಕ ಒತ್ತಡದಿಂದ ದೂರವಿದ್ದು, ಆರೋಗ್ಯಕಾರಿ ಆಹಾರಪದ್ಧತಿ ನಿದ್ದೆ ಸರಿಯಾದ ಜೀವನಶೈಲಿ ಅಂದರೆ ಪ್ರತಿದಿನ ವ್ಯಾಯಾಮ, ನಡಿಗೆ, ಧ್ಯಾನ ಅಥವಾ ಯೋಗಾ ಭ್ಯಾಸಗಳನ್ನು ಅನುಸರಿಸು ತ್ತಾರೆಯೋ, ಇಂತಹ ಜನರ ಹತ್ತಿರನೂ ಕೂಡ ಈ ಮಧುಮೇಹ ಸುಳಿಯುವುದಿಲ್ಲ.

ಆದರೆ ಕೆಟ್ಟಆಹಾರ ಪದ್ಧತಿಯ ಜೊತೆಗೆ ಜಡ ಜೀವನಶೈಲಿ ಹೊಂದಿರುವ ವ್ಯಕ್ತಿಗಳಿಗೆ ಈ ಕಾಯಿಲೆ ಬಹಳ ಬೇಗನೇ ಅಪ್ಪಿಕೊಂಡು ಬಿಡುತ್ತದೆ! ಆ ಬಳಿಕ ಸಾಯುವವರೆಗೂ ಈ ಕಾಯಿಲೆಯ ಜೊತೆ ಗೆಯೇ ಜೀವನ ನಡೆಸುವ ಪರಿಸ್ಥಿತಿ ಎದುರಾಗುತ್ತದೆ. ಅಂತಹ ಭಯಾಕನ ಕಾಯಿಲೆ ಇದು.

Advertisement

ಬನ್ನಿ ಇಂದಿನ ಲೇಖನದಲ್ಲಿ ಈಗಾಗಲೇ ಈ ಕಾಯಿಲೆಯನ್ನು ಅಂಟಿಸಿಕೊಂಡವರು ಯಾವೆಲ್ಲಾ ಬಗೆಯ ಹಸಿರೆಲೆ ಸೊಪ್ಪುಗಳನ್ನು ಸೇವನೆ ಮಾಡಿ, ನಿಯಂತ್ರಣ ಮಾಡಿಕೊಳ್ಳ ಬಹುದು ಎನ್ನುವುದರ ಬಗ್ಗೆ ನೋಡೋಣ…

ಪಾಲಕ್ ಸೊಪ್ಪು

ಚಳಿಗಾಲದಲ್ಲಿ ಹೇರಳವಾಗಿ ಕಂಡು ಬರುವ ಈ ಸೊಪ್ಪು, ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಆರೋಗ್ಯ ಕಾರಿ ಪ್ರಯೋಜನಗಳನ್ನು ಒಳಗೊಂಡಿದೆ.

ಇದೇ ಕಾರಣಕ್ಕೆ ನಾವು ದಿನನಿತ್ಯ ಸೇವನೆ ಮಾಡುವ ಹಲವಾರು ತರಕಾರಿಗಳು ಹಾಗೂ ಹಸಿರೆಲೆ ಆಹಾರ ಪದಾರ್ಥಗಳಲ್ಲಿ ಪಾಲಕ್ ಸೊಪ್ಪು ಮೊದಲನೇ ಸ್ಥಾನದಲ್ಲಿ ಬಂದು ನಿಲ್ಲುತ್ತದೆ.

ಮಧುಮೇಹಿಗಳ ವಿಷ್ಯದಲ್ಲಿ ಈ ಸೊಪ್ಪಿನ ಪಾತ್ರ

ಇನ್ನು ಮಧುಮೇಹಿಗಳ ವಿಷ್ಯದಲ್ಲಿ ಹೇಳುವುದಾದರೆ, ಈ ಸೊಪ್ಪಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಪ್ರಮಾಣದಲ್ಲಿ ಕಂಡು ಬರುವುದರಿಂದ, ರಕ್ತದಲ್ಲಿನ ಗ್ಲುಕೋಸ್ ಮಟ್ಟ ಏರಿಕೆ ಆಗದಂತೆ ತಡೆಯುವುದು ಮಾತ್ರವಲ್ಲದೆ, ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿಡುವುದು.

ಹರಿವೆ ಸೊಪ್ಪು

ಎಲ್ಲಾ ಬಗೆಯ ಹಸಿರೆಲೆ ಸೊಪ್ಪಿನಂತೆ ಹರಿವೆ ಸೊಪ್ಪು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರಮುಖ ವಾಗಿ ತನ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳನ್ನು ಹೊಂದಿರುವ ಜೊತೆಗೆ ಕರಗದ ಹಾಗೂ ಕರಗದೇ ಇರುವ ನಾರಿನಾಂಶವು ಅತ್ಯಧಿಕ ಮಟ್ಟದಲ್ಲಿ ಕಂಡು ಬರುತ್ತದೆ.

ಈ ಸೊಪ್ಪಿನಲ್ಲಿ ಕಂಡುಬರುವ ಪ್ರಯೋಜನಗಳ ಬಗ್ಗೆ ಹೇಳುವುದಾದರೆ…

ಬಹುಮುಖ್ಯವಾಗಿ ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಹಾಗೂ ನಾರಿನಾಂಶದ ಪ್ರಮಾಣ ಕಂಡು ಬರುವುದರಿಂದ, ಜೀರ್ಣಾಂಗ ವ್ಯವಸ್ಥೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು ಅನುಕೂಲ ವಾಗುತ್ತದೆ. .

ಇದರಿಂದ ಮೆಟಬಾಲಿಸಂ ಪ್ರಕ್ರಿಯೆ ಚುರುಕುಗೊಂಡು, ನಾವು ಸೇವಿಸಿದ ಆಹಾರಗಳು ಸರಿಯಾಗಿ ಜೀರ್ಣಗೊಳ್ಳಲು ನೆರವಾಗುತ್ತದೆ.

ಇದರಿಂದ ನಾವು ಸೇವನೆ ಮಾಡಿದ ಆಹಾರದಲ್ಲಿ ಕಂಡುಬರುವ ಗ್ಲೂಕೋಸ್ ಸರಿಯಾಗಿ ಕರಗಿ, ರಕ್ತದಲ್ಲಿ ಗ್ಲುಕೋಸ್ ಮಟ್ಟ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಮಧುಮೇಹವನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದಂತೆ ಆಗುತ್ತದೆ.

ನುಗ್ಗೆ ಸೊಪ್ಪು

ನುಗ್ಗೆ ಸೊಪ್ಪಿನಲ್ಲಿ ಪೋಷಕಾಂಶಗಳ ಭಂಡಾರವೇ ಅಡಗಿದೆ ಎಂದರೆ ತಪ್ಪಾಗಲಾರದು. ತನ್ನಲ್ಲಿ ವಿವಿಧ ಬಗೆಯ ವಿಟಮಿನ್ಸ್‌ಗಳನ್ನು ಒಳಗೊಂಡಿರುವ ಜೊತೆಗೆ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣಾಂಶ, ಮೆಗ್ನೀಸಿಯಂ, ರಂಜಕ ಮತ್ತು ಸತುವುಗಳಂತಹ ಅಗತ್ಯ ಪೋಷಕಾಂಶಗಳನ್ನು ಅಗಾಧ ಪ್ರಮಾಣಗಳಲ್ಲಿ ಈ ಸೊಪ್ಪಿನಲ್ಲಿ ಕಂಡು ಬರುತ್ತದೆ.

ಒಂದು ಅಧ್ಯಾಯನದ ಪ್ರಕಾರ, ಈ ಸೊಪ್ಪಿನ ಸಾರದಲ್ಲಿ ಆಂಟಿ ಡಯಾಬಿಟಿಕ್ ಮತ್ತು ಆಂಟಿ – ಆಕ್ಸಿಡೆಂಟ್ ಎನ್ನುವ ನೈಸರ್ಗಿಕ ಸಂಯುಕ್ತ ಅಂಶಗಳು ಅಧಿಕ ಪ್ರಮಾಣದಲ್ಲಿ ಸಿಗುವುದರಿಂದ ಮಧು ಮೇಹ ರೋಗವನ್ನು ನಿಯಂತ್ರಣ ಮಾಡುವಲ್ಲಿ ಸಹಾಯ ಮಾಡುತ್ತದೆ. ಎಲ್ಲಾಕ್ಕಿಂತ ಮುಖ್ಯ ವಾಗಿ, ಈ ಸೊಪ್ಪಿನಲ್ಲಿ ವಿಟಮಿನ್ ಡಿ ಅಂಶ ಹೇರಳವಾಗಿದ್ದು, ಮನುಷ್ಯನ ದೇಹದಲ್ಲಿ ಇನ್ಸುಲಿನ್ ನ ಮಟ್ಟ ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ.

ವೈದ್ಯರಾದ ಡಾ. ಶರದ್‌ ಕುಲಕರ್ಣಿ ಅವರು ಹೇಳುವ ಪ್ರಕಾರ

ಸಕ್ಕರೆ ಕಾಯಿಲೆ ಎನ್ನುವುದು ಕೇವಲ ಸಿಹಿ ಪದಾರ್ಥಗಳನ್ನು ತಿಂದರೆ ಬರುತ್ತದೆ ಎನ್ನುವ ಭಾವನೆ ಹೆಚ್ಚಿನವರದು. ಆದರೆ ಇದು ತಪ್ಪು ಕಲ್ಪನೆ, ಮನುಷ್ಯ ಯಾವಾಗ ಅಸಮತೋಲಿತ ಜೀವನಶೈಲಿ, ಕೃತಕ ಸಿಹಿಕಾರಕ ಪದಾರ್ಥಗಳನ್ನು ಸೇವನೆ ಮಾಡುವುದರ ಜೊತೆಗೆ, ಜಡ ಜೀವನ ಶೈಲಿ ಅನುಸರಿಸುತ್ತಾರೆಯೋ, ಅವರ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತಾ ಹೋಗುತ್ತದೆ, ಜೊತೆಗೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಏರಿಕೆ ಆಗುತ್ತದೆ ಹೀಗಾಗಿ ಮಧುಮೇಹಕ್ಕೆ ಹೆಚ್ಚು ಜನರು ತುತ್ತಾಗುತ್ತಾರೆ.

ಮಧುಮೇಹದ ಸೂಚನೆಗಳು ಕಂಡುಬಂದರೆ, ಕೂಡಲೇ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ. ದೈನಂದಿನ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಡಯೆಟ್‌, ಯೋಗಾಭ್ಯಾಸ, ಪ್ರಾಣಾಯಾಮಕ್ಕೆ ಹೆಚ್ಚಿನ ಒತ್ತು ನೀಡಿ.

ಎಣ್ಣೆ ಪದಾರ್ಥಗಳು, ಜಂಕ್ ಫುಡ್, ಕೃತಕ ಅಥವಾ ಸಂಸ್ಕರಿಸಿದ ಸಿಹಿ ಪದಾರ್ಥಗಳನ್ನು ಸೇವನೆ ಯಿಂದ ಆದಷ್ಟು ದೂರವಿರಿ. ತಾಜಾ ಹಣ್ಣು ತರಕಾರಿ, ಹಣ್ಣುಗಳನ್ನು ಹೆಚ್ಚು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement