Mother’s Day 2024: ತಾಯಿಗೆ ಮೀಸಲಾದ ಈ ದಿನದ ಮಹತ್ವ ತಿಳಿಯಿರಿ

ಹುಟ್ಟಿದ ಪ್ರತಿಯೊಬ್ಬರು ಮೊದಲು ಕರೆಯುವ ಪದ ಅಮ್ಮಾ.. ನಮಗೆ ನೋವಾದಾಗ ಬರುವ ಮೊದಲ ಶಬ್ದ ಅಮ್ಮಾ… ಸಂಕಷ್ಟದಲ್ಲಿ ನಮ್ಮೊಂದಿಗೆ ಇರುವ ಮೊದಲ ವ್ಯಕ್ತಿ ಅಮ್ಮಾ… ಅಮ್ಮನಿಗೆ ಸರಿಸಾಟಿಯಾದವರು ಈ ಜಗತ್ತಿನಲ್ಲಿ ಯಾರೂ ಕೂಡ ಇಲ್ಲ. ಈ ಭಾವನೆಯನ್ನು ಪ್ರತಿಬಿಂಬಿಸಲು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಇಡೀ ವಿಶ್ವವೇ ತಾಯಿಯ ಪ್ರೀತಿಯನ್ನು ಗುರುತಿಸಿ ಆಕೆಗೆ ಕೃತಜ್ಞತೆ ಸಲ್ಲಿಸುವ ದಿನವಿದು.

ಗೌರವ, ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವಾಗಿರುವ ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದು ಪೂಜಿಸಲಾಗುತ್ತದೆ. ತಾಯಂದಿರ ದಿನವು ಪ್ರಪಂಚದಾದ್ಯಂತದ ಎಲ್ಲಾ ತಾಯಂದಿರಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನವು ಜನರಿಗೆ ತಾಯಿಯ ಮಹತ್ವವನ್ನು ನೆನಪಿಸುತ್ತದೆ.

 

Advertisement

 

ತನ್ನ ಮಕ್ಕಳ ಪ್ರತಿ ಹಂತದಲ್ಲೂ ತಾಯಿ ಜೊತೆಯಾಗಿರುತ್ತಾಳೆ. ಅವರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಾಳೆ. ಜೀವನದುದ್ದಕ್ಕೂ ತನ್ನ ಜೀವ ಮುಡಿಪಾಗಿಟ್ಟು ಮಕ್ಕಳ ಅಭಿವೃದ್ದಿಗೆ ಶ್ರಮಿಸುತ್ತಾಳೆ. ಹೀಗಾಗಿನೇ ಇದನ್ನು ಕರಳು ಬಳ್ಳಿ ಸಂಬಂಧ ಅಂತ ಕರೆಯಲಾಗುತ್ತದೆ.

 

ತಾಯಿಯ ಪ್ರೀತಿ, ಸಮರ್ಪಣೆ ಮತ್ತು ಹೋರಾಟ ನಮಗೆ ಜೀವನದಲ್ಲಿ ನಮ್ಮ ಗಮ್ಯಸ್ಥಾನವನ್ನು ತಲುಪಲು ಶಕ್ತಿಯನ್ನು ನೀಡುತ್ತದೆ. ತಾಯಿಯ ಪ್ರೀತಿ, ವಾತ್ಸಲ್ಯ ಮತ್ತು ತಾಳ್ಮೆ ಮಾತ್ರ ನಾವು ಉತ್ತಮ ವ್ಯಕ್ತಿಯಾಗಲು ಸಹಾಯ ಮಾಡುತ್ತದೆ.

 

ತಾಯಂದಿರ ದಿನ ಹೇಗೆ ಪ್ರಾರಂಭವಾಯಿತು?
1908 ರಲ್ಲಿ ಅಮೆರಿಕದಲ್ಲಿ ತಾಯಂದಿರ ದಿನ ಪ್ರಾರಂಭವಾಯಿತು. ನಂತರ, ಅಮೇರಿಕನ್ ಮಹಿಳೆ ಅನ್ನಾ ಜಾರ್ವಿಸ್ ಅವರ ಎಲ್ಲಾ ಪ್ರಯತ್ನಗಳ ನಂತರ, ಈ ಮಹತ್ವದ ದಿನ ಆಚರಿಸಲು ಪ್ರಾರಂಭವಾಯಿತು. ವಾಸ್ತವವಾಗಿ, ಅನ್ನಾ ಜಾರ್ವಿಸ್ ತನ್ನ ತಾಯಿ ಆನ್ ರೀವ್ಸ್ ಜಾರ್ವಿಸ್ ಅವರ ನೆನಪಿಗಾಗಿ ಈ ದಿನವನ್ನು ಪ್ರಾರಂಭಿಸಿದರು. ನಂತರ ಕ್ರಮೇಣ ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲು ಪ್ರಾರಂಭಿಸಲಾಗಿದೆ.

ತಾಯಿಗೆ ನೀಡಲು ಉತ್ತಮ ಉಡುಗೊರೆ ಕಲ್ಪನೆ:
ಈ ದಿನ ಮಾತ್ರವಲ್ಲ ಪ್ರತಿದಿನ ತಾಯಿಯನ್ನು ಸಂತೋಷವಾಗಿಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಕ್ಕಳಿಂದ ಯಾವುದೇ ನಿರೀಕ್ಷೆ ಇಲ್ಲದೆ ಬದುಕುವ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ತುಂಬಾ ಮುಖ್ಯ. ಇದು ನಾಳೆ ನಮ್ಮ ಜೀವನವನ್ನು ನಿರ್ಧರಿಸುತ್ತದೆ. ನಾವು ನಮ್ಮ ತಾಯಿಯನ್ನು ಗೌರವಿಸುವಂತೆ ಮುಮದಿನ ನಮ್ಮ ಮಕ್ಕಳು ನಮ್ಮನ್ನು ಗೌರವದಿಂದ ನೋಡಿಕೊಳ್ಳುತ್ತಾರೆ.

 

ಬಿಡುವಿಲ್ಲದ ಈ ದಿನಮಾನಗಳಲ್ಲಿ ತಾಯಂದಿರ ದಿನವನ್ನು ಆಚರಿಸಿ ಅವರಿಗೆ ಅಭಿನಂದಿಸುವುದು, ಅವರನ್ನು ಖುಷಿಯಾಗಿಡುವುದು ತುಂಬಾ ಮುಖ್ಯ. ಅವರು ಇಷ್ಟಪಡುವ ವಸ್ತುಗಳನ್ನು ಖರೀದಿಸುವುದು, ಆಭರಣ, ಸೀರೆ, ಉಡುಗೊರೆಗಳನ್ನು ನೀಡಿ ಅವರನ್ನು ಸಂತೋಷವಾಗಿಡಿ.

 

ತಾಯಿಯ ಆಯ್ಕೆಯ ಆಹಾರ: ಈ ದಿನ ನಿಮ್ಮ ತಾಯಿ ಇಷ್ಟಪಡುವ ವಿಶೇಷವಾದ ಆಹಾರವನ್ನು ತಯಾರಿ. ನೀವು ನಿಮ್ಮ ತಾಯಿಗೆ ಸ್ಪಾ ಅಥವಾ ಮಸಾಜ್ ಗಿಫ್ಟ್ ಕಾರ್ಡ್ ನೀಡಬಹುದು. ತಾಯಂದಿರ ದಿನವು ನಮ್ಮ ತಾಯಂದಿರೊಂದಿಗೆ ಸಮಯ ಕಳೆಯಲು ಮತ್ತು ಅವರೊಂದಿಗೆ ನಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಅವಕಾಶವನ್ನು ಪಡೆಯುವ ಸಂದರ್ಭವಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ.

 

ಎರಡು ಬಾರಿ ತಾಯಂದಿರ ದಿನ ಆಚರಣೆ
ಭಾರತ ಸೇರಿದಂತೆ ಯುಎಸ್, ಕೆನಡಾ, ಆಸ್ಟ್ರೇಲಿಯಾ, ಯುರೋಪ್ ದೇಶಗಳಲ್ಲಿ ತಾಯಂದಿರ ದಿನವನ್ನು ಆಚರಿಸಲು ಜನ ಸಜ್ಜಾಗುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೆ ವಿಶೇಷವಾಗಿರುವ ಈ ತಾಯಂದಿರ ದಿನವನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿ ಮೇ ಎರಡನೇ ವಾರ, ದಿನಾಂಕ 12ರಂದು ಅಮ್ಮಂದಿರ ದಿನ ಆಚರಿಸಲಾಗುತ್ತಿದೆ. ಈಸ್ಟರ್ ಭಾನುವಾರದ ಮೂರು ವಾರಗಳ ಮೊದಲು ಭಾನುವಾರದಂದು ತಾಯಂದಿರ ವಿಶೇಷ ದಿನವನ್ನು ಆಚರಿಸಲಾಗುತ್ತದೆ. 2024 ರಲ್ಲಿ, ಮಾರ್ಚ್ 31 ರಂದು ತಾಯಂದಿರ ದಿನವನ್ನು ಆಚರಿಸಲಾಯಿತು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement