ನವದೆಹಲಿ: ರೈಡ್-ಹೇಲಿಂಗ್ ಪ್ಲಾಟ್ಫಾರ್ಮ್ ಓಲಾ ಕ್ಯಾಬ್ಸ್ ಮತ್ತೊಂದು ಉನ್ನತ ಮಟ್ಟದ ನಿರ್ಗಮನಕ್ಕೆ ಸಾಕ್ಷಿಯಾಗಿದೆ. ಹೌದು. ಓಲಾ ಕ್ಯಾಬ್ಸ್ನ ಮಾತೃ ಸಂಸ್ಥೆ ಎಎಲ್ಐ ಟೆಕ್ನಾಲಜೀಸ್ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಕಾರ್ತಿಕ್ ಗುಪ್ತಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಎರಡು ವಾರಗಳ ಮೊದಲು ಓಲಾ ಕ್ಯಾಬ್ಸ್ ಸಿಇಒ ಹೇಮಂತ್ ಬಕ್ಷಿ ಕೂಡ ರಾಜೀನಾಮೆ ನೀಡಿದ್ದರು. ಕಾರ್ತಿಕ್ ಗುಪ್ತಾ ಅವರು ಅಧಿಕಾರ ವಹಿಸಿಕೊಂಡ ಏಳು ತಿಂಗಳ ನಂತರ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಹುದ್ದೆಯಿಂದ ಕೆಳಗಿಳಿದ್ದಾರೆ. ರೈಡ್-ಹೇಲಿಂಗ್ ಪ್ಲಾಟ್ಫಾರ್ಮ್ ಉದ್ಯೋಗ ಕಡಿತವನ್ನು ಘೋಷಿಸಿತು. ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್ ಅವರು ಲಾಭದಾಯಕತೆಯನ್ನು ಸುಧಾರಿಸಲು ಮತ್ತು ಭವಿಷ್ಯದ ಬೆಳವಣಿಗೆಗೆ ತಯಾರಿ ಮಾಡಲು ಪುನರ್ರಚನಾ ವ್ಯಾಯಾಮದ ಕುರಿತು ಪತ್ರದಲ್ಲಿ ಸಿಬ್ಬಂದಿಯನ್ನು ಉದ್ದೇಶಿಸಿ ತಿಳಿಸಿದ್ದಾರೆ. ಪುನಾರಚನೆ ಪ್ರಕ್ರಿಯೆಯು ಕಂಪನಿಯ ಕನಿಷ್ಠ 10 ಪ್ರತಿಶತದಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಕಂಪನಿಯು ಓಲಾ ಸಂಸ್ಥಾಪಕರ ಸಹೋದರ ಅಂಕುಶ್ ಅಗರ್ವಾಲ್ ಅವರನ್ನು ಓಲಾ ಹಣಕಾಸು ಸೇವೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿದೆ.