ಗುಜರಾತ್: ಮುಳುಗುತ್ತಿದ್ದ ಮೂವರು ಯುವಕರನ್ನು ಬಿಜೆಪಿ ಶಾಸಕರೊಬ್ಬರು ಸಮುದ್ರಕ್ಕೆ ಹಾರಿ ರಕ್ಷಿಸಿರುವ ಘಟನೆ ನಡೆದಿದ್ದು, ಶಾಸಕರು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿ ರಾಜುಲಾ ಶಾಸಕ ಹೀರಾ ಸೋಲಂಕಿ ಯುವಕರನ್ನು ರಕ್ಷಿಸಿದ್ದಾರೆ.
ಇನ್ನು ಬುಧವಾರ ಮಧ್ಯಾಹ್ನ ನಾಲ್ವರು ಯುವಕರು ಸಮುದ್ರ ಕೊಲ್ಲಿಯಲ್ಲಿ ಸ್ನಾನಕ್ಕೆ ತೆರಳಿದ್ದು, ಈ ಸಮಯದಲ್ಲಿ, ಅವರು ಆಳವಾದ ನೀರಿನಲ್ಲಿ ಮುಳುಗುತ್ತಿದ್ದರು. ಇದನ್ನು ಕಂಡ ಸ್ಥಳೀಯರು ಕಡಲ ತೀರದಲ್ಲಿರುವ ರಾಜುಲಾ ಬಿಜೆಪಿ ಶಾಸಕ ಹೀರಾ ಸೋಲಂಕಿ ಅವರಿಗೆ ಮಾಹಿತಿ ನೀಡಿದ್ದಾರೆ.
https://bcsuddi.com/%e0%b2%9a%e0%b2%be%e0%b2%ae%e0%b2%b0%e0%b2%be%e0%b2%9c%e0%b2%a8%e0%b2%97%e0%b2%b0-%e0%b2%ac%e0%b2%b3%e0%b2%bf-%e0%b2%b2%e0%b2%98%e0%b3%81-%e0%b2%b5%e0%b2%bf%e0%b2%ae%e0%b2%be%e0%b2%a8-%e0%b2%aa/
ಶಾಸಕ ಬೋಟ್ ಸಹಾಯದಿಂದ ಸ್ಥಳಕ್ಕಾಗಮಿಸಿ ನೀರಿನಲ್ಲಿ ಮುಳುಗುತ್ತಿದ್ದ ಯುವಕರನ್ನು ರಕ್ಷಿಸಲು ಸಮುದ್ರಕ್ಕೆ ಹಾರಿದ್ದು, ಮೂವರು ಯುವಕರು ಸಕಾಲದಲ್ಲಿ ಹೊರಬಂದಿದ್ದಾರೆ. ಅದೇ ಸಮಯದಲ್ಲಿ, ಒಬ್ಬ ಯುವಕ ಪತ್ತೆಯಾಗಿಲ್ಲ, ಅವರ ಹುಡುಕಾಟದಲ್ಲಿ ಸುಮಾರು 2 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು. ಇದಾದ ಬಳಿಕ ನಾಲ್ಕನೇ ಯುವಕನ ಮೃತದೇಹ ಪತ್ತೆಯಾಗಿದೆ.