ಪಿತ್ತ, ತಲೆನೋವು ಮತ್ತು ಶೀತವನ್ನು ನಿಯಂತ್ರಿಸಲು ನಿಮ್ಮ ಅಡುಗೆ ಮನೆಯಲ್ಲೇ ಇದೆ ಮದ್ದು…

ಎಷ್ಟೇ ಮಳೆಯಾದರೂ ಸುಡು ಬಿಸಿಲು ನಮ್ಮನ್ನು ತಂಪಾಗಿರಲು ಬಿಡುತ್ತಿಲ್ಲ. ಅತಿಯಾದ ಬಿಸಿಲು ಅತಿಯಾದ ಮಳೆ ಎರಡೂ ಆರೋಗ್ಯಕ್ಕೆ ಹಾನಿಕಾರಕವೇ. ಇದರಿಂದ ಪಿತ್ತ, ತಲೆನೋವು ಮತ್ತು ಶೀತ ಇತರ ಕಾಯಿಲೆಗಳು ನಮ್ಮ ದೇಹವನ್ನು ಬಲಹೀನವಾಗಿಸಿಬಿಡುತ್ತವೆ.

ಹೀಗಾಗಿ ಸುಡು ಬಿಸಿಲಿನಲ್ಲಿ ಚೇತನ್ಯ ನೀಡುವ ಪಾನೀಯ ಕುಡಿಯುವುದು ಒಳ್ಳೆಯದು. ಬೇಸಿಗೆಯಲ್ಲಿ ಏಲಕ್ಕಿ ಸೇವಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಅಡುಗೆ ಮನೆಯಲ್ಲಿರುವ ಈ ಸಣ್ಣ ಪದಾರ್ಥ ನಿಮ್ಮ ಆರೋಗ್ಯಕ್ಕೆ ಅದೆಷ್ಟು ಪ್ರಯೋಜನಕಾರಿ ಅನ್ನೋದನ್ನು ನೋಡೋಣ.
ಏಲಕ್ಕಿ, ಬೆಲ್ಲ ಮತ್ತು ನಿಂಬೆ ಪಾನೀಯ ದೇಹಕ್ಕೆ ಶಕ್ತಿಯೊಂದಿಗೆ ನಮ್ಮನ್ನು ಕ್ರೀಯಾಶೀಲರನ್ನಾಗಿಸುವ ಅದ್ಭುತ ಪಾನೀಯಗಳಾಗಿವೆ. ಜೊತೆಗೆ ಇವುಗಳನ್ನು ಮನೆಯಲ್ಲಿ ತುಂಬಾ ಸುಲಭವಾಗಿ ಮಾಡಿ ಬಿಡಬಹುದು. ತಂಪು ಪಾನೀಯಾಗಳಲ್ಲಿ ಸುಗಂಧ ದ್ರವ್ಯವಾಗಿ ಬಳಸುವ ಏಲಕ್ಕಿಯಲ್ಲಿ ಔಷಧೀಯ ಗುಣಗಳಿವೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಏಲಕ್ಕಿ ಪಿತ್ತ, ತಲೆನೋವು ಮತ್ತು ಶೀತವನ್ನು ನಿಯಂತ್ರಿಸುತ್ತದೆ. ಹೀಗಾಗಿ ತೊಗಟೆ, ಲವಂಗ, ಏಲಕ್ಕಿಯಂತಹ ಸುಗಂಧಭರಿತ ಪದಾರ್ಥಗಳಿಗೆ ನಮ್ಮ ಅಡುಗೆ ಮನೆಯ ಕಪಾಟಿನಲ್ಲಿ ವಿಶೇಷ ಸ್ಥಾನವಿದೆ. ಸಿಹಿತಿಂಡಿಗಳನ್ನು ತಯಾರಿಸಲು ಬಳಸುವ ಏಲಕ್ಕಿಯಲ್ಲಿ ಅಸಂಖ್ಯಾತ ಪೋಷಕಾಂಶಗಳಿವೆ. ಏಲಕ್ಕಿ ಬೀಜಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್, ಕಬ್ಬಿಣ, ಸೋಡಿಯಂ, ವಿಟಮಿನ್ ಎ, ಬಿ, ಸಿ ಮುತಾಂದ ಪೋಷಕಾಂಶಗಳಿವೆ. ಜೊತೆಗೆ ತೈಲಗಳಿಂದಾಗಿ ಬಳಸುವ ಏಲಕ್ಕಿಯು ಅಪರೂಪದ ಔಷಧೀಯ ಗುಣಗಳನ್ನು ಹೊಂದಿದೆ.

ಸಮುದ್ರಕ್ಕೆ ಹಾರಿ ಮುಳುಗುತ್ತಿದ್ದ ಯುವಕರನ್ನು ರಕ್ಷಿಸಿದ ಬಿಜೆಪಿ ಶಾಸಕ!

Advertisement

ಏಲಕ್ಕಿ ಟೀ ಕುಡಿಯುವುದರಿಂದ ದೇಹ ಮತ್ತು ಮನಸ್ಸು ಉಲ್ಲಾಸವಾಗಿರುತ್ತದೆ. ಇದು ಒತ್ತಡ ನಿವಾರಣೆಗೆ ಒಳ್ಳೆಯದು ಎಂದು ಆಯುರ್ವೇದ ಶಿಫಾರಸು ಮಾಡುತ್ತದೆ. ಒಂದು ಕಪ್ ಏಲಕ್ಕಿ ಚಹಾವು ಶೀತ ಮತ್ತು ಜ್ವರವನ್ನು ಗುಣಪಡಿಸುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಏಲಕ್ಕಿ ಪುಡಿ ಮತ್ತು ಟೀ ಪುಡಿ ಎರಡನ್ನೂ ಸೇರಿಸಿ ಟೀ ತಯಾರಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆರಡು ಬಾರಿ ಕುಡಿದರೆ ನರಗಳು ಬಲಗೊಳ್ಳುತ್ತವೆ. ಏಲಕ್ಕಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವುದರಿಂದ ನರಗಳ ಒತ್ತಡವನ್ನು ನಿವಾರಣೆ ಮಾಡಬಹುದು. ನಾಲ್ಕು ಕಾಳುಮೆಣಸು, ಸ್ವಲ್ಪ ಏಲಕ್ಕಿ ಜೊತೆಗೆ ಹಾಲನ್ನು ಚಿಮುಕಿಸಿ ರುಬ್ಬಿ ಪೇಸ್ಟ್ ಮಾಡಿ ಸೇವಿಸಿದರೆ ತಲೆನೋವು ಗುಣವಾಗುತ್ತದೆ. ಏಲಕ್ಕಿ ಪುಡಿ, ಜೀರಿಗೆ ಪುಡಿಯೊಂದಿಗೆ ಸ್ವಲ್ಪ ಕರಿಮೆಣಸು ಬೆರೆಸಿ ನೆಲ್ಲಿಕಾಯಿ ಗಾತ್ರದಲ್ಲಿ ಒಂದೊಂದು ಬೆಳಿಗ್ಗೆ ಮತ್ತು ಸಂಜೆ ಸೇವಿಸಿದರೆ ಪಿತ್ತ ನಿವಾರಣೆಯಾಗುತ್ತದೆ. ಏಲಕ್ಕಿ, ಕಾಳುಮೆಣಸು ಇವುಗಳ ಕಷಾಯ ಮಾಡಿ ಕುಡಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ.

ಏಲಕ್ಕಿಯನ್ನು ನುಂಗುವುದರಿಂದ ಮತ್ತು ಲಾಲಾರಸವನ್ನು ನುಂಗುವುದರಿಂದ ಬಾಯಿಯ ದುರ್ವಾಸನೆಯು ನಿವಾರಣೆಯಾಗುತ್ತದೆ. ಬಾಯಿ ಹುಣ್ಣಾದರೂ ವಾಸಿಯಾಗುತ್ತದೆ. ಅನಾನಸ್ ರಸವನ್ನು ಏಲಕ್ಕಿ ಪುಡಿಯೊಂದಿಗೆ ಕುಡಿಯುವುದರಿಂದ ಮೂತ್ರಪಿಂಡದ ಕಾಯಿಲೆಗಳು ಗುಣವಾಗುತ್ತವೆ. ನೀರಿನ ದಾಹವನ್ನು ಕಡಿಮೆ ಮಾಡುತ್ತದೆ.
ಮಾತ್ರವಲ್ಲದೆ ಏಲಕ್ಕಿ ಇದು ಅಜೀರ್ಣ ಮತ್ತು ವಾಯು ಸಮಸ್ಯೆಗೆ ಅತ್ಯುತ್ತಮ ಪರಿಹಾರವಾಗಿದೆ. ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತೊಂದು ವಿಚಾರವೆಂದರೆ ಏಲಕ್ಕಿ ನಡುಕವನ್ನು ನಿವಾರಿಸಬಲ್ಲದು. ಸ್ನಾಯು ಸೆಳೆತ, ಕರುಳು ಮತ್ತು ಹೊಟ್ಟೆಯ ಸೆಳೆತದಿಂದ ಪರಿಹಾರವನ್ನು ನೀಡುವುದಲ್ಲದೆ, ಬಿಕ್ಕಳಿಕೆಯಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ದೇಹದಾದ್ಯಂತ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಕಾಲುಗಳಲ್ಲಿನ ನೋವಿನಿಂದ ಬಳಲುತ್ತಿರುವವರಿಗೆ ಏಲಕ್ಕಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಸ್ವಲ್ಪ ಏಲಕ್ಕಿ ಮತ್ತು ಅರಿಶಿನದೊಂದಿಗೆ ಬೇವಿನ ಪುಡಿಯನ್ನು ಸ್ವಲ್ಪ ಸೇರಿಸಿ ಉರಿದು ಪುಡಿ ಮಾಡಿ ಸೇವಿಸಿದ ರಾಶ್ ನಿವಾರಣೆಯಾಗುತ್ತವೆ. ದಿನನಿತ್ಯದ ಆಹಾರದಲ್ಲಿ ಬಳಸುವ ಏಲಕ್ಕಿ ನಮ್ಮ ಮನೆಯಲ್ಲಿ ಇರಲೇಬೇಕಾದ ವಸ್ತುವಾಗಿದ್ದು, ಇದು ಅತ್ಯುತ್ತಮ ಔಷಧವಾಗಿಯೂ ಕಾರ್ಯನಿರ್ವಹಿಸುತ್ತದೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement