ಜೀರ್ಣಶಕ್ತಿ ಹೆಚ್ಚಿಸುವ ಮಾವಿನಕಾಯಿಯ ಆರೋಗ್ಯ ಗುಣಗಳು

ಹಣ್ಣುಗಳ ರಾಜ ಮಾವು ಕೇವಲ ಹಣ್ಣಾದ ಮೇಲೆ ಸೇವಿಸುವುದು ಮಾತ್ರವಲ್ಲ ಮಾವಿನ ಹಣ್ಣಿಗಿಂತ ದುಪ್ಪಟ್ಟು ಉಪಯೋಗ ಮಾವಿನ ಕಾಯಿಯದ್ದಿದೆ. ಮಾವಿನಕಾಯಿ ಉಪ್ಪಿನಕಾಯಿ, ಚಟ್ಟಿ, ಗೊಜ್ಜು ಹೀಗೆ ಹತ್ತಾರು ಬಗೆಯ ಪದಾರ್ಥಗಳನ್ನು ಮಾಡಿ ಸವಿಯಬಹುದು. ಮಾವಿನ ಕಾಯಿ ಸೇವಿಸುವುದರಿಂದ ಬೊಜ್ಜು ಉರಿಯೂತ, ಕ್ಯಾನ್ಸರ್ ವಿರೋಧಿ ಗುಣ, ಹಾರ್ಮೋನ್ ವ್ಯವಸ್ಥೆ ಮತ್ತು ಕಾಮೋತ್ತೇಜಕ ಆರೋಗ್ಯ ಪ್ರಯೋಜನಗಳನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ. ಅದರಲ್ಲಿಯೂ ಬೇಸಿಗೆಯಲ್ಲಿ ಮಾವಿಕಾಯಿ ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಸರಿಯಾದ ಪ್ರಮಾಣದಲ್ಲಿ ಸರಿಯಾದ ರೀತಿಯಲ್ಲಿ ಮಾವನ್ನು ಸೇವಿಸದರೆ ಆರೋಗ್ಯವು ಹೆಚ್ಚುತ್ತದೆ ಎನ್ನುತ್ತದೆ ಭಾರತೀಯ ಪುರಾತನ ಆರೋಗ್ಯ ಪದ್ಧತಿ ಆಯುರ್ವೇದ. ಹಾಗಾದರೆ ಮಾವಿನ ಕಾಯಿ ಸೇವನೆಯಿಂದ ದೇಹಕ್ಕೆ ಯಾವೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ನೀವು ತಿಳಿದುಕೊಳ್ಳಲೇಬೇಕು ಇಲ್ಲಿದೆ ನೋಡಿ ಮಾಹಿತಿ. ದೇಹದ ನಿರ್ಜಲೀಕರಣವನ್ನು ತಡೆಯುತ್ತದೆ: ಬೇಸಿಗೆಯಲ್ಲಿ ಸೂರ್ಯನ ಬಿಸಿ ಶಾಖಕಕ್ಕೆ ದೇಹ ನಿರ್ಜಲೀಕರಣಗೊಳ್ಳುತ್ತದೆ. ಇದಕ್ಕಾಗಿ ಮಾವಿನ ಕಾಯಿಯನ್ನು ಸೇವಿಸಿ. ಹಸಿ ಮಾವು ದೇಹದಿಂದ ಕಬ್ಬಿಣ ಮತ್ತು ಸೋಡಿಯಂ ಕ್ಲೋರೈಡ್‌ನ ಅತಿಯಾದ ನಷ್ಟವನ್ನು ತಡೆಯುವುದರಿಂದ ನಿರ್ಜಲೀಕರಣವನ್ನು ತಡೆಯುತ್ತದೆ.ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ:ಜೀರ್ಣಶಕ್ತಿ ಉತ್ತಮವಾಗಿದ್ದರೆ ದೇಹವೂ ಆರೋಗ್ಯವಾಗಿರುತ್ತದೆ. ಬೇಸಿಗೆಯಲ್ಲಿ ಮದುವೆ, ಮುಂಜಿಯಂತಹ ಕಾರ್ಯಕ್ರಗಳು ಹೆಚ್ಚು ಸಮಾರಂಭಗಳಲ್ಲಿ ಊಟ ಮಾಡಿದಾಗ ಕೆಲವೊಮ್ಮೆ ಜೀರ್ಣವಾಗುವುದಿಲ್ಲ. ಅಂತಹ ಸಂದರ್ಭಗಳಿ ಮಾವಿನಕಾಯಿಯನ್ನು ತಿನ್ನಿರಿ. ಮಾವಿನ ಕಾಯಿಯಲ್ಲಿ ದೇಹದ ಜೀರ್ಣಶಕ್ತಿಯನ್ನು ಹೆಚ್ಚು ಮಾಡುವಂತಹ ನಾರಿನ ಅಂಶಗಳು, ಪ್ರೋಟೀನ್ ಅಂಶ ಸಿಗುತ್ತದೆ. ಇದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ದೇಹದ ಸದೃಢವಾಗಿರಬೇಕು, ಆರೋಗ್ಯವಾಗಿರಬೇಕು ಎಂದರೆ ರೋಗ ನಿರೋಧಕ ಶಕ್ತಿ ಅಗತ್ಯವಾಘಿರುತ್ತದೆ. ಮಾವಿನ ಕಾಯಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಾವಿನ ಕಾಯಿಯಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು, ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತೆ. ವಿಟಮಿನ್ ಎ, ಕ್ಯಾಲ್ಸಿಯಂ ಹಾಗೂ ಮೆಗ್ನೆಷಿಯಂ ಕೂಡ ಅಧಿಕ ಪ್ರಮಾಣದಲ್ಲಿದೆ. ದೇಹದ ತೂಕವನ್ನು ಕಡಿಮೆ ಮಾಡುತ್ತದೆ: ನಾರಿನ ಅಂಶ ಹೆಚ್ಚಾಗಿರುವ ಮಾವಿನಕಾಯಿ ಬಹಳಷ್ಟು ಸಮಯದವರೆಗೆ ನಮಗೆ ಹೊಟ್ಟೆ ಹಸಿವು ಆಗದಂತೆ ಕಾಪಾಡುತ್ತದೆ., ಆಹಾರ ಸರಿಯಾಗಿ ಜೀರ್ಣ ಆಗುವಂತೆ ನೋಡಿಕೊಂಡು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಅತಿಯಾಗಿ ತಿನ್ನುವ ಅಭ್ಯಾಸವನ್ನು ತಪ್ಪಿಸಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement