ಒಟ್ಟಾವ: ಕಳೆದ ವರ್ಷ ಖಲಿಸ್ತಾನ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಕೊಂದ ಆರೋಪ ಹೊತ್ತಿರುವ ಮೂವರು ಭಾರತೀಯ ಪ್ರಜೆಗಳು ಮೇ 21 ರಂದು ಕೆನಡಾದ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಖುದ್ದಾಗಿ ಹಾಜರಾಗಿದ್ದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು ಸಮುದಾಯದ ಜನರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರಬಾರದು ಎಂದು ಆದೇಶಿಸಿದರು.
ಕರಣ್ ಬ್ರಾರ್(22), ಕಮಲ್ ಪ್ರೀತ್ ಸಿಂಗ್(22), ಕರಣ್ ಪ್ರೀತ್ ಸಿಂಗ್(28) ಅವರು ಸರ್ರೆ ಯಲ್ಲಿರುವ ಬ್ರಿಟಿಷ್ ಕೊಲಂಬಿಯಾ ಪ್ರಾಂತೀಯ ನ್ಯಾಯಾಲಯಕ್ಕೆ
ಹಾಜರಾದರು. ಮತ್ತೊಬ್ಬ ಆರೋ ಪಿ ಅಮನ್ದೀ ಪ್ ಸಿಂ ಗ್(22) ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದರು.
ನ್ಯಾಯಾಲಯಕ್ಕೆ ಖುದ್ದು ಹಾಜರಾದವರು ಕೆಂಪು ಬಣ್ಣದ ಜೈಲಿನ ಉಡುಗೆಯನ್ನು ತೊಟ್ಟಿದ್ದರು. ಮೇ 10ರಂದು ಒಂಟಾರಿಯೊದಲ್ಲಿ ಬಂಧನಕ್ಕೀಡಾಗಿರುವ ಅಮನ್ದೀಪ್ ಸಿಂಗ್ ಕಸ್ಟಡಿ ಮುಂದುವರಿದಿದೆ.
ನ್ಯಾಯಾಧೀ ಶಮಾರ್ಕ್ ಜೆಟ್ಟೆ ಒಂಟರ್ಸೆಪ್ಟ ಮುಂದಿನ ವಿಚಾರಣೆಯನ್ನು ಜೂನ್ 25ಕ್ಕೆ ಮುಂದೂಡಿದರು. ಈ ಪ್ರಕರಣದಲ್ಲಿ ಮಾತ್ರ ಇಷ್ಟು ಪ್ರಮಾಣದ ಸಮುದಾಯದ ಹಿತಾಸಕ್ತಿ ಏಕೆ? ಆರೋ ಪಿಗಳು ನ್ಯಾಯಸಮ್ಮತ ವಿಚಾರಣೆಗೆ ಅರ್ಹರು ಎಂದು ಕರಣ್ ಬ್ರಾರ್ ಪರ ಹಾಜರಾಗಿದ್ದ ವಕೀಲ ರಿಚರ್ಡ್ ಫೊವ್ಲರ್ ಹೇಳಿದ್ದಾರೆ.
45 ವರ್ಷದ ನಿಜ್ಜರ್ ಅವರನ್ನು ಜೂನ್ 18, 2023 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದ ಹೊರಗೆ ಕೊಲ್ಲಲಾಯಿತು.