ಬೇಸಿಗೆಯಲ್ಲಿ ಮೊಸರು ಬಹಳ ಬೇಗ ಹುಳಿ ಬರುವುದು ಸಾಮಾನ್ಯ. ಹುಳಿ ಬಂದ ಮೊಸರನ್ನು ಸಾಮಾನ್ಯವಾಗಿ ಯಾರೂ ತಿನ್ನಲು ಇಷ್ಟ ಪಡುವುದಿಲ್ಲ. ಇದರಿಂದ ಮಜ್ಜಿಗೆ ಹುಳಿ, ರವೆ ದೋಸೆ ಮಾಡಬಹುದು. ಇಷ್ಟೇ ಅಲ್ಲದೆ ಹುಳಿ ಬಂದ ಮೊಸರನ್ನು ಗೋಧಿ ಹಿಟ್ಟಿಗೆ ಹಾಕಿ ಕಲಿಸಿ, ಅರ್ಧ ಗಂಟೆಯ ನಂತರ, ಮೃದುವಾದ, ಉಬ್ಬಿದ ಪೂರಿಗಳನ್ನು ತಯಾರಿಸಬಹುದು. ಒಮ್ಮೆ ನೀವೂ ಟ್ರೈ ಮಾಡಿ.
