ಉದ್ದಿನಬೇಳೆ ಹಾಕಿ ದೋಸೆ ಮಾಡುತ್ತೇವೆ. ದಿನಾ ಇದು ತಿಂದು ತಿಂದು ಬೇಜಾರಾದವರು ಒಮ್ಮೆ ತೊಗರಿಬೇಳೆ ಉಪಯೋಗಿಸಿ ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ.
ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಾಡುವ ವಿಧಾನ ಕೂಡ ಬಲು ಸುಲಭ ಹಾಗೂ ಸರಳವಾಗಿದೆ. ಬೇಕಾಗುವ ಸಾಮಾಗ್ರಿಗಳು: ಇಡ್ಲಿ ಅಕ್ಕಿ-1 ಕಪ್, ತೊಗರಿ ಬೇಳೆ- 1 ಕಪ್, ಉದ್ದಿನಬೇಳೆ-1/4 ಕಪ್, ಉಪ್ಪು ರುಚಿಗೆ ತಕ್ಕಷ್ಟು, ನೀರು-ಅಗತ್ಯವಿರುವಷ್ಟು, ಕ್ಯಾರೆಟ್ ತುರಿ-1/2 ಕಪ್, ಹಸಿಮೆಣಸು-3 ಸಣ್ಣಗೆ ಹೆಚ್ಚಿದ್ದು, ಶುಂಠಿ-1 ಟೇಬಲ್ ಸ್ಪೂನ್, ಕರಿಬೇವು-10 ಎಸಳು, ಸಣ್ಣಗೆ ಹೆಚ್ಚಿದ ಈರುಳ್ಳಿ-1. ಮಾಡುವ ವಿಧಾನ: ಮೊದಲಿಗೆ ಬೇಳೆ ಹಾಗೂ ಅಕ್ಕಿಯನ್ನು ಚೆನ್ನಾಗಿ ತೊಳೆದು 4 ಗಂಟೆಗಳ ನೆನೆಸಿ.
ನಂತರ ಇದನ್ನು ಒಂದು ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ, ಕ್ಯಾರೆಟ್ ತುರಿ, ಹಸಿಮೆಣಸು, ಶುಂಠಿ, ಹರಿಬೇವು, ಉಪ್ಪು, ಈರುಳ್ಳಿಯನ್ನೆಲ್ಲಾ ಸೇರಿಸಿ. ನಂತರ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದು ಬಿಸಿಯಾದಾಗ ಎಣ್ಣೆ ಹಾಕಿ. ನಂತರ ದೋಸೆ ಹಿಟ್ಟು ಹಾಕಿ ದೋಸೆ ಮಾಡಿ. ಎರಡು ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ.